ಅಲ್‌ಸಾದ್ ವೆಲ್ಫೇರ್ ಅಸೋಸಿಯೇಷನ್‌ನಿಂದ ರಕ್ತದಾನ ಶಿಬಿರ

Update: 2019-06-24 13:22 GMT

ಮಂಗಳೂರು, ಜೂ.24: ಅಲ್‌ಸಾದ್ ವೆಲ್ಫೇರ್ ಅಸೋಸಿಯೇಷನ್ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಆಸ್ಪತ್ರೆ ಮಂಗಳೂರು ವತಿಯಿಂದ ಮಂಗಳೂರಿನ ಜೆಪ್ಪುವಿನಲ್ಲಿ ಬೃಹತ್ ರಕ್ತದಾನ ಹಾಗೂ ‘ವೋಟರ್ ಐಡಿ’ಗೆ ಹೆಸರು ನೋಂದಣಿ ಕಾರ್ಯ ರವಿವಾರ ನಡೆದಿದೆ.

ಸುಮಾರು 55 ಯುವಕರು ಉತ್ಸುಕರಾಗಿ ರಕ್ತದಾನವನ್ನು ಮಾಡಿದ್ದಾರೆ. ಮತದಾರರ ಗುರುತು ಚೀಟಿಗೆ ಹೆಸರು ನೋಂದಣಿ ಮಾಡಿಕೊಂಡರು. ಬ್ಲಡ್ ಡೋನರ್ ಸಂಸ್ಥೆಯ ಮುಖ್ಯಸ್ಥ ಸಿದ್ದೀಕ್ ರಕ್ತದಾನದ ಕೊಡುಗೆ ಗುರುತಿಸಿ ಅಲ್‌ಸಾದ್ ಸಂಸ್ಥೆಯಿಂದ ಅವರನ್ನು ಸನ್ಮಾನಿಸಲಾಯಿತು.

ಅದೇ ರೀತಿ ಖಲಂದರ್ ಎಂಬವರು ರಮಝಾನ್ ಮಾಸದ ಸಂದರ್ಭ ತುರ್ತು ರಕ್ತದ ಅವಶ್ಯಕತೆ ಇದ್ದಾಗ ಸ್ಪಂದಿಸಿದ ಕಾರ್ಯ ಗುರುತಿಸಿ ಸಂಸ್ಥೆಯಿಂದ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯರಾದ ಡಾ.ಅಕ್ಷಯ್, ಡಾ.ಕಿಶನ್, ಡಾ.ನವೀನ್, ಡಾ.ವಿದ್ಯಾ, ಡಾ.ಲಕ್ಷ್ಮೀ, ನವಾಝ್, ಬ್ಲಡ್ ಡೋನರ್ ಅಧ್ಯಕ್ಷ ಸಿದ್ದೀಕ್, ಅಲ್‌ಸಾದ್ ವೇಲ್ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಇಸ್ರಾನ್, ಉಪಾಧ್ಯಾಕ್ಷ ಹಬೀಬ್, ಖಜಾಂಚಿ ಜಾಸೀಮ್, ಎನ್.ಆರ್.ಐ ಇನ್‌ಚಾರ್ಜ್ ಮುಝಮ್ಮಿಲ್, ಜಿ.ಎಂ. ಶರಫತ್, ಕಾರ್ಯದರ್ಶಿ ನವಾಝ್ ಜೆಪ್ಪು, ಬಾಬುಲ್, ಮುಸ್ತಾಕ್, ಸಲಾಂ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News