ಜೂ.30ರ ತನಕ ಪುತ್ತೂರು ಕಂದಾಯ ಇಲಾಖೆ ಕಡತ ವಿಲೇವಾರಿ ಸಪ್ತಾಹ

Update: 2019-06-24 13:52 GMT

ಪುತ್ತೂರು: ವಿಲೇವಾರಿಯಾಗದೆ ಬಾಕಿಯಾಗಿರುವ ಕಡತಗಳನ್ನು ತ್ವರಿತ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಜೂ. 24ರಿಂದ ಜೂ.30ರ ತನಕ ಕಡತ ವಿಲೇವಾರಿ ಸಪ್ತಾಯ ನಡೆಯಲಿದೆ ಎಂದು ಪುತ್ತೂರು ಪ್ರಭಾತ ತಹಸೀಲ್ದಾರ್ ಅನಂತ ಶಂಕರ್ ಅವರು ತಿಳಿಸಿದ್ದಾರೆ. 

ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕಡತಗಳು ನಿಗಧಿತ ಅವಧಿಯೊಳಗೆ ವಿಲೇವಾರಿಯಾಗದೇ ತುಂಬಾ ದಿನಗಳಿಂದ ಬಾಕಿಯಾಗಿರುತ್ತದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದೆ. ಕಡತ ವಿಲೇವಾರಿ ಸಪ್ತಾಹವು ಸರಕಾರದ ಮಟ್ಟದಲ್ಲಿ ನಡೆಯುತ್ತಿವೆ.

ಕಡತ ವಿಲೇವಾರಿ ಸಪ್ತಾಹದಲ್ಲಿ ಈ ಹಿಂದೆ ಬಾಕಿ ಉಳಿದಿರುವ ಕಡತಗಳನ್ನು ನಿಗದಿತ ನಮೂನೆಯಲ್ಲಿ ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಪುತ್ತೂರು ಕಂದಾಯ ಇಲಾಖೆಯಲ್ಲಿ ಕಚೇರಿ ಕಡತಗಳು 1720, ಮೇಲಾಧಿಕಾರಿಗಳ 90, ಅಧೀನ ಕಚೇರಿಗಳಲ್ಲಿ 1190 ಹಾಗೂ ಇತರೆಗಳು 8 ಸೇರಿದಂತೆ ಕಳೆದ ಮೇ ತಿಂಗಳ ಅಂತ್ಯದ ವರೆಗೆ ಒಟ್ಟು 3008 ಕಡತಗಳು ಬಾಕಿ ಉಳಿದಿವೆ. 

ಕಂದಾಯ ಇಲಾಖೆಗಳ ಕಡತ ವಿಲೇವಾರಿ ಸಪ್ತಾಯವೂ ಒಂದು ವಾರದಾಗಿದ್ದು, ಭಾನುವಾರದಂದು ಕೂಡ ಹಾಜರಾಗಿ ಕೆಲಸ ನಿರ್ವಹಿಸಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ. ಹಾಗಾಗಿ ಕಂದಾಯ ಇಲಾಖೆಯೂ ಮುಂದಿನ ರವಿವಾರವೂ ಕೆಲಸ ನಿರ್ವಹಿಸಿ ಕಡತ ವಿಲೇವಾರಿ ಸಪ್ತಾಯವನ್ನು ಯಶಸ್ವಿಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News