ಸರಕಾರ ಬದಲಾಗಿದೆ,ಆದರೆ ‘ಆರ್ಥಿಕ ಹಲ್ಲೆ ’ ಮುಂದುವರಿದಿದೆ:ಆರ್‌ಬಿಐ ಡೆ.ಗವರ್ನರ್ ರಾಜೀನಾಮೆಗೆ ಕಾಂಗ್ರೆಸ್ ಪ್ರತಿಕ್ರಿಯೆ

Update: 2019-06-24 14:45 GMT

ಹೊಸದಿಲ್ಲಿ,ಜೂ.24: ಆರ್‌ಬಿಐ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಆಡಳಿತಕ್ಕೆ ‘ಸತ್ಯ ದರ್ಶನ ’ ಮಾಡಿಸಲು ಯತ್ನಿಸಿದ್ದ ತಜ್ಞರ ಸುದೀರ್ಘ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದಾರೆ. ಈ ಹಿಂದೆ ನಾಲ್ವರು ಆರ್ಥಿಕ ಸಲಹೆಗಾರರು,ಇಬ್ಬರು ಆರ್‌ಬಿಐ ಗವರ್ನರ್‌ಗಳು ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದರು ಎಂದು ಕಾಂಗ್ರೆಸ್ ಪಕ್ಷವು ಸೋಮವಾರ ಹೇಳಿದೆ.

‘‘ಸರಕಾರವು ಬದಲಾಗಿದೆ,ಆದರೆ ‘ಆರ್ಥಿಕ ಹಲ್ಲೆ ’ ಮುಂದುವರಿದಿದೆ ’’ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರು ಟ್ವೀಟಿಸಿದ್ದಾರೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆಚಾರ್ಯ ಅವರು ತನ್ನ ಮೂರು ವರ್ಷಗಳ ಅಧಿಕಾರಾವಧಿ ಮುಗಿಯಲು ಇನ್ನೂ ಆರು ತಿಂಗಳುಗಳು ಬಾಕಿ ಇರುವಾಗಲೇ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘‘ಆಚಾರ್ಯ ಅವರ ರಾಜೀನಾಮೆಗೂ ಆರ್‌ಬಿಐಗೆ ಹೆಚ್ಚಿನ ಸ್ವಾಯತ್ತೆ ದೊರೆಯಬೇಕೆಂಬ ಅವರ ನಿಲುವಿಗೂ ಸಂಬಂಧವಿರಬಹುದು ’’ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News