ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆ

Update: 2019-06-24 17:07 GMT

ಭೋಪಾಲ, ಜೂ.24: ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆಯ ಅಂಗವಾಗಿ ಯುದ್ದದ ಪ್ರಮುಖ ಘಟನೆಗಳನ್ನು ಗ್ವಾಲಿಯರ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ಪುನರಾವರ್ತಿಸಿತು.

ಜಮ್ಮು- ಕಾಶ್ಮೀರದ ದ್ರಾಸ್-ಕಾರ್ಗಿಲ್ ಪ್ರದೇಶದ ಟೈಗರ್ ಹಿಲ್ಸ್‌ನಲ್ಲಿ ನಡೆದ ಕಾಳಗದ ದೃಶ್ಯ, ಅಲ್ಲದೆ ಪರ್ವತದ ಮಾದರಿಯನ್ನು ನಿರ್ಮಿಸಿ ಅದರ ಮೇಲೆ ಮಿರಾಜ್ 2000 ಯುದ್ಧವಿಮಾನಗಳಿಂದ ಬಾಂಬ್ ಸುರಿಯುವ ಘಟನೆಗಳನ್ನು ಪುನರಾವರ್ತಿಸಲಾಯಿತು. ಏರ್‌ಚೀಫ್ ಮಾರ್ಶಲ್ ಬಿಎಸ್ ಧನೋವಾ ಮುಖ್ಯ ಅತಿಥಿಯಾಗಿದ್ದರು.

 ಆಪರೇಷನ್ ವಿಜಯ್ ಎಂದು ಕರೆಸಿಕೊಳ್ಳುವ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡು ಶೌರ್ಯಪ್ರಶಸ್ತಿ ಪಡೆದ ಹಲವು ಯೋಧರು(ಸೇವೆಯಲ್ಲಿರುವವರು ಹಾಗೂ ನಿವೃತ್ತರು) ಪಾಲ್ಗೊಂಡಿದ್ದರು. ಐದು ಮಿರಾಜ್ 2000 ಯುದ್ಧವಿಮಾನ, ಎರಡು ಮಿಗ್ 21 ಯುದ್ಧ ವಿಮಾನ ಹಾಗೂ ಒಂದು ಸುಕೋಯ್ 30 ಎಂಕೆಐ ವಿಮಾನ ಆಗಸದಲ್ಲಿ ಮಿಂಚಿನ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ನೀಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News