ಸಾಲ ತೀರಿಸಲು ಟ್ರೋಫಿ, ಪದಕಗಳನ್ನು ಹರಾಜು ಹಾಕಿದ ವಿಂಬಲ್ಡನ್ ಚಾಂಪಿಯನ್

Update: 2019-06-24 17:40 GMT

ತನ್ನ ಸಾಲವನ್ನು ತೀರಿಸುವ ಸಲುವಾಗಿ ಜರ್ಮನ್ ಟೆನ್ನಿಸ್ ತಾರೆ ಬೋರಿಸ್ ಬೆಕ್ಕರ್ ತನ್ನ ಟ್ರೋಫಿಗಳು, ಪದಕಗಳನ್ನು ಆನ್ ಲೈನ್ ನಲ್ಲಿ ಹರಾಜು ಹಾಕಲು ಮುಂದಾಗಿದ್ದಾರೆ.

ಈಗಾಗಲೇ ದಿವಾಳಿಯಾಗಿರುವ ಈ ಚಾಂಪಿಯನ್ 17 ವರ್ಷ ವಯಸ್ಸಿನಲ್ಲೇ ವಿಂಬಲ್ಡನ್ ಗೆದ್ದು ಸಾಧನೆ ಮಾಡಿದ್ದರು. ಇದೀಗ ತನ್ನ ಸಾಲದ ಹೊರೆ ಕಡಿಮೆಗೊಳಿಸಲು ಮೆಡಲ್ ಗಳು, ಪ್ರಶಸ್ತಿಗಳು, ವಾಚ್ ಗಳು, ಫೊಟೊಗಳು ಚಾಲೆಂಜ್ ಕಪ್ ನ ಪ್ರತಿಕೃತಿ, ರೆನ್ ಶಾ ಕಪ್ ಪ್ರತಿಕೃತಿಗಳನ್ನು ಆನ್ ಲೈನ್ ನಲ್ಲಿ ಹರಾಜು ಹಾಕಲಿದ್ದಾರೆ.

1990ರ ಅವರ ವಿಂಬಲ್ಡನ್ ಫೈನಲಿಸ್ಟ್ ಪದಕ, ಯುಎಸ್ ಓಪನ್ ಸಿಲ್ವರ್ ಕಪ್ ನ ಪ್ರತಿಕೃತಿ ಕೂಡ ಈ ಪಟ್ಟಿಯಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News