ಸೆಝ್ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2019-06-24 17:58 GMT

ಹೊಸದಿಲ್ಲಿ,ಜೂ.24: ಟ್ರಸ್ಟ್‌ಗಳು ವಿಶೇಷ ಆರ್ಥಿಕ ವಲಯ (ಸೆಝ್)ಗಳಲ್ಲಿ ಘಟಕಗಳನ್ನು ಸ್ಥಾಪಿಸಲು ಅವಕಾಶ ನೀಡುವ ಮಸೂದೆಯನ್ನು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಯು ಹಿಂದಿನ ಸರಕಾರವು ಹೊರಡಿಸಿದ್ದ ಅಧ್ಯಾದೇಶವನ್ನು ರದ್ದುಗೊಳಿಸಲಿದೆ.

ವಿಶೇಷ ಆರ್ಥಿಕ ವಲಯಗಳ ಕಾಯ್ದೆ,2005ರ ಕಲಂ 2ರ ಉಪ ಕಲಂ (v )ರ ತಿದ್ದುಪಡಿಯ ಬಳಿಕ ಕೇಂದ್ರ ಸರಕಾರದಿಂದ ಅಧಿಸೂಚಿತ ಟ್ರಸ್ಟ್ ಅಥವಾ ಯಾವುದೇ ಸಂಸ್ಥೆ ಸೆಝ್‌ಗಳಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಅನುಮತಿಗೆ ಅರ್ಹವಾಗುತ್ತದೆ.

ಕಾಯ್ದೆಯಲ್ಲಿನ ಹಾಲಿ ನಿಯಮಗಳು ಸೆಝ್‌ಗಳಲ್ಲಿ ಘಟಕಗಳನ್ನು ಸ್ಥಾಪಿಸಲು ಟ್ರಸ್ಟ್‌ಗಳಿಗೆ ಅನುಮತಿ ನೀಡುವುದಿಲ್ಲ. ಘಟಕಗಳ ಸ್ಥಾಪನೆಗೆ ಅನುಮತಿ ಕೋರಲು ಅವಕಾಶ ಹೊಂದಿರುವ ‘ವ್ಯಕ್ತಿ’ಯ ಕಾಯ್ದೆಯಲ್ಲಿನ ವ್ಯಾಖ್ಯೆಯು ಟ್ರಸ್ಟ್‌ಗಳನ್ನು ಒಳಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News