ಶಕ್ತಿ ವಸತಿ ಶಾಲೆಯಲ್ಲಿ ಯುವ ಸ್ಪಂದನ ಕಾರ್ಯಾಗಾರ

Update: 2019-06-24 18:44 GMT

ಮಂಗಳೂರು, ಜೂ.24: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ ‘ಯುವ ಸ್ಪಂದನ’ ಕಾರ್ಯಾಗಾರವು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಸೋಮವಾರ ನೆರವೇರಿತು.
ಆಪ್ತಸಲಹೆಗಾರರಾದ ನಿಶಾ ಮತ್ತು ಅಕ್ಷತಾ ವಿದ್ಯಾರ್ಥಿಗಳೊಂದಿಗೆ ಕಲಿಕೆಯಲ್ಲಿ ಹಿಂದುಳಿಕೆ, ಮರೆವು, ಮಾನಸಿಕ ಒತ್ತಡ, ಉದ್ವೇಗ ಇತ್ಯಾದಿ ವಿಚಾರಗಳ ಬಗ್ಗೆ ಸವಿವರವಾಗಿ ಚರ್ಚಿಸಿದರು. ಕಿರುಪ್ರಶ್ನಾವಳಿಯೊಂದಿಗೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಆಡಳಿತಾಧಿಕಾರಿ ಜನಾರ್ದನ ಆಚಾರ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮಾಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News