ಜೂ.30: ಮೊಗವೀರ ಮಹಾಸಭಾದಿಂದ 600 ಮೀನುಗಾರರಿಗೆ ಉಚಿತ ಅಕ್ಕಿ ವಿತರಣೆ

Update: 2019-06-25 07:06 GMT

ಮಂಗಳೂರು, ಜೂ.25: ಮಳೆಯ ಕೊರತೆಯಿಂದಾಗಿ ಈ ಬಾರಿ ನಾಡ ದೋಣಿ ಮೀನುಗಾರಿಕೆಯೂ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಳೂರು ಮೊಗವೀರ ಮಹಾಸಭಾವು ತನ್ನ ಸದಸ್ಯರಿಗೆ ಉಚಿತ ಅಕ್ಕಿ ವಿತರಣೆಯ ಮೂಲಕ ಸದಸ್ಯರ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಲು ಮುಂದಾಗಿದೆ.

ಮಹಾಸಭಾದ ವತಿಯಿಂದ ಜೂ.30ರಂದು 600 ಸದಸ್ಯರಿಗೆ ತಲಾ 25 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಭಾಷ್ ಕುಂದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬೋಳೂರು ಮೊಗವೀರ ಗ್ರಾಮ ಸಭಾಂಗಣದಲ್ಲಿ ಬೆಳಗ್ಗೆ 10:30ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ತಣ್ಣೀರುಬಾವಿ, ಬೊಕ್ಕಪಟ್ಣ ಬೆಂಗ್ರೆ, ಕುದ್ರೋಳಿ ಬೆಂಗ್ರೆ ಹಾಗೂ ಕುದ್ರು ಪರಿಸರದ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರಿಗೆ ಉಚಿತ ಪಾಸ್, ಸ್ಥಳೀಯ ಉದ್ಯೋಗಸ್ಥರಿಗೆ ರಿಯಾಯಿತಿ ದರದಲ್ಲಿ ಪಾಸ್ ವಿತರಿಸಲಾಗುವುದು ಎಂದರು.

ಇದಲ್ಲದೆ ಗ್ರಾಮ ಹಿರಿಯ ನಾಗರಿಗೆ, ವಿಕಲಚೇತನರಿಗೆ, ಅಶಕ್ತರಿಗೆ ಪಿಂಚಣಿ ಯೋಜನೆ, ಗ್ರಾಮದ ಸದಸ್ಯರು ಮರಣ ಹೊಂದಿದಾಗ ಅವರ ಉತ್ತರ ಕ್ರಿಯೆ ಹಾಗೂ ಇತರ ಕಾರ್ಯಗಳಿಗೆ ತಲಾ 25,ಂ000 ರೂ.ಗಳ ಶಾಶ್ವರ ಮರಣ ಫಂಡ್ ಯೋಜನೆ, ಗ್ರಾಮದ ಸದಸ್ಯರು ಮರಣ ಹೊಂದಿದಾಗ ಅವರ ಅಂತ್ಯ ಸಂಸ್ಕಾರಕ್ಕೆ ಉಚಿತ ಕಟ್ಟಿಗೆ ಯೋಜನೆ, ಗ್ರಾಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರ ಯೋಜನೆ, ಮೊದಲಾದ ಕಾರ್ಯಕ್ರಮಗಳನ್ನು ಕೂಡಾ ಮಹಾಸಭಾದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಮತ್ಸಕ್ಷಾಮದಿಂದಾಗಿ ಮೀನುಗಾರರು ಸುಮಾರು ಮೂರು ನಾಲ್ಕು ತಿಂಗಳ ಕಾಲ ತೀವ್ರ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ರೈತರಿಗೆ ನೀಡುವಂತೆ ಮೀನುಗಾರರಿಗೂ ಪ್ರೋತ್ಸಾಹಧನವನ್ನು ನೀಡುವ ಮೂಲಕ ಮೀನುಗಾರರ ಕಣ್ಣೀರಿಗೆ ಸರಕಾರ ಸ್ಪಂದಿಸಬೇಕು. ಈ ಬಗ್ಗೆ ದ.ಕ. ಮೊಗವೀರ ಮಹಾಜನ ಸಂಘದ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ರಾಜಶೇಖರ್ ಕರ್ಕೇರ, ಸದಸ್ಯರಾದ ಯಶವಂತ್ ಮೆಂಡನ್, ತಾರನಾಥ್, ಸೋಮಶೇಖರ್ ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News