ಚುನಾವಣಾ ಕಾರ್ಯಕ್ಕೆ ಅಡ್ಡಿ: ಶಾಸಕನಿಗೆ 3 ತಿಂಗಳು ಜೈಲು

Update: 2019-06-25 14:13 GMT

ಹೊಸದಿಲ್ಲಿ, ಜೂ.25: 2013ರ ರಾಜ್ಯ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರಿಗೆ ದಿಲ್ಲಿ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

 ಹೆಚ್ಚುವರಿ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ 10,000ರೂ. ಜಾಮೀನು ಬಾಂಡ್‌ನ ಆಧಾರದಲ್ಲಿ ಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ಆದೇಶದ ವಿರುದ್ಧ ಅವರು ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಸರಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮನೋಜ್ ಕುಮಾರ್ ತಪ್ಪಿತಸ್ಥ ಎಂದು ನ್ಯಾಯಾಲಯ ಜೂನ್ 11ರಂದು ತೀರ್ಪು ನೀಡಿತ್ತು.

ಪೂರ್ವ ದಿಲ್ಲಿ ಕಲ್ಯಾಣಪುರದಲ್ಲಿ ಇತರ 50 ಪ್ರತಿಭಟನಾಕಾರರ ಜೊತೆ ಸೇರಿ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪವನ್ನು ಕುಮಾರ್ ಎದುರಿಸುತ್ತಿದ್ದರು. ಈ ಘಟನೆ 2013 ದಿಲ್ಲಿ ವಿಧಾನಸಭೆ ಚುನಾವಣಯ ಸಂದರ್ಭದಲ್ಲಿ ದಿಲ್ಲಿ ಪಂಚಾಯತ್ ನಿಗಮ ಶಾಲೆಯ ಮುಖ್ಯ ಗೇಟ್‌ನ ಬಳಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News