​ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಇದು..

Update: 2019-06-26 04:06 GMT

ಹೊಸದಿಲ್ಲಿ, ಜೂ.26: ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕಲು ಪೊಲೀಸ್ ಠಾಣೆ, ಅಪರಾಧ ತಡೆ, ಪ್ರಕರಣಗಳ ವಿಲೇವಾರಿ, ಅಪರಾಧ ಪತ್ತೆ, ಸಮುದಾಯ ಕಾವಲು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ದೇಶದ ಅತ್ಯುತ್ತಮ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪೊಲೀಸ್ ಠಾಣೆಯ ಮೂಲ ಸೌಕರ್ಯ ಮತ್ತು ಕ್ಷಮತೆ ಬಗ್ಗೆ ನಾಗರಿಕರ ಅಭಿಪ್ರಾಯದ ಅಂಶವನ್ನು ಕೂಡಾ ರ್ಯಾಂಕಿಂಗ್‌ಗೆ ಶೇಕಡ 20ರಷ್ಟು ಪರಿಗಣಿಸಲಾಗಿತ್ತು. 2018ನೇ ಸಾಲಿನ ಪೊಲೀಸ್ ಠಾಣೆಗಳ ರ್ಯಾಂಕಿಂಗ್ ಪಟ್ಟಿಯನ್ನು ಗೃಹ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದೆ.

ಈ ರ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟ 15,666 ಠಾಣೆಗಳ ಪೈಕಿ ಕಲು ಒಂದನೇ ರ್ಯಾಂಕ್ ಪಡೆದಿದೆ. ಈ ಠಾಣೆ ಸಿಬ್ಬಂದಿಗೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಹೊಂದುವ ಜತೆಗೆ ಮಹಿಳಾ ಹೆಲ್ಪ್ ಡೆಸ್ಕ್, ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿದ್ದು, ವೈಫೈ ಸರ್ವರ್‌ನಿಂದ ಸುಸಜ್ಜಿತವಾಗಿದೆ ಎಂದು ವರದಿ ವಿವರಿಸಿದೆ.

ಅಂಡಮನ್ ಮತ್ತು ನಿಕೋಬಾರ್ ದ್ವೀಪದ ನಿಕೋಬಾರ್ ಜಿಲ್ಲೆಯ ಕ್ಯಾಂಪ್‌ಬೆಲ್ ಬೇ ಠಾಣೆ ಎರಡನೇ ರ್ಯಾಂಕ್ ಪಡೆದಿದೆ. ಇದು ಕೂಡಾ ಪ್ರತ್ಯೇಕ ಮಹಿಳಾ ಹೆಲ್ಪ್‌ಡೆಸ್ಕ್, ಮಕ್ಕಳಸ್ನೇಹಿ ಕೊಠಡಿ, ಐಟಿ ಕೊಠಡಿ ಮತ್ತು ದೂರುದಾರರು ಹಾಗೂ ಸಂದರ್ಶಕರಿಗೆ ಸೂಕ್ತ ನಿರೀಕ್ಷಣಾ ಕೊಠಡಿಯನ್ನು ಹೊಂದಿದೆ.
ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಫರಾಕ್ಕಾ ಪೊಲೀಸ್ ಠಾಣೆ ಮೂರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News