ಎರಡು ವರ್ಷ ಮುಂಚಿತವಾಗಿ 1 ಕೋಟಿ ಮನೆ ವಿತರಿಸಲು ಕೇಂದ್ರ ಚಿಂತನೆ

Update: 2019-06-26 06:09 GMT

ಹೊಸದಿಲ್ಲಿ, ಜೂ.26: ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಅಡಿ ನಗರ ಪ್ರದೇಶಗಳಲ್ಲಿ ನಿರ್ಮಿಸಿರುವ 1 ಕೋಟಿ ಮನೆಗಳನ್ನು ಅಂತಿಮ ಗಡುವಿಗಿಂತ ಎರಡು ವರ್ಷ ಮುಂಚಿತವಾಗಿಯೇ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಸಚಿವಾಲಯ ಮಂಗಳವಾರ ಘೋಷಿಸಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಮನೆ ವಿತರಿಸಲು ಸರಕಾರ 2022ರ ಗಡುವು ನೀಡಿತ್ತು.

‘‘ಮುಂದಿನ ವರ್ಷದ ಮೊದಲ ತ್ರೈಮಾಸಿಕದ(ಮೂರು ತಿಂಗಳಲ್ಲಿ)ವೇಳೆ ಎಲ್ಲ ಅಗತ್ಯ ಸಂಖ್ಯೆಯ ಮನೆಗಳಿಗೆ ಮಂಜೂರಾತಿ ಪಡೆಯಲಾಗುವುದು. ವರ್ಷದ ಅಂತ್ಯದ ವೇಳೆಗೆ ನಿರ್ಮಾಣ ಪೂರ್ಣಗೊಳಿಸುವಿಕೆಯನ್ನು ಸಾಧಿಸಲಾಗುವುದು ಎಂಬ ವಿಶ್ವಾಸವಿದೆ’’ಎಂದು ಕೇಂದ್ರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

 ‘‘ಎಲ್ಲರಿಗೂ ವಸತಿ ಎಂಬ ಕನಸನ್ನು ಈಡೇರಿಸಲು ಯಾವುದೇ ಕಲ್ಲನ್ನು ಬಾಕಿ ಉಳಿಸಬಾರದು. ಇದು ಕೋಟ್ಯಂತರ ಆಕಾಂಕ್ಷಿಗಳಿಗೆ ರೆಕ್ಕೆ ನೀಡುತ್ತದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News