34ನೇ ನೆಕ್ಕಿಲಾಡಿ ಗ್ರಾಪಂ ವಿರುದ್ಧ ಜೂ.27ರಂದು ಧರಣಿ

Update: 2019-06-26 07:22 GMT

ಉಪ್ಪಿನಂಗಡಿ, ಜೂ.26: 34ನೇ ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿ ಹಾಗೂ ದಾರಿದೀಪ ಅಳವಡಿಕೆ ಕಾಮಗಾರಿಯನ್ನು ನಡೆಸುವಂತೆ ಒತ್ತಾಯಿಸಿ ನಮ್ಮೂರು- ನೆಕ್ಕಿಲಾಡಿ ಸಂಘಟನೆಯ ನೇತೃತ್ವದಲ್ಲಿ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಜೂ.27ರಂದು ಧರಣಿ ನಡೆಯಲಿದೆ.

ಗ್ರಾಪಂನ ಜಡತ್ವ ಧೋರಣೆಯನ್ನು ಖಂಡಿಸಿ 34ನೇ ನೆಕ್ಕಿಲಾಡಿ ಗ್ರಾಪಂ ವಠಾರದಲ್ಲಿ ಪೂರ್ವಾಹ್ನ 11 ಗಂಟೆಗೆ ಧರಣಿ ನಡೆಯಲಿದೆ. ಮಳೆಗಾಲ ಆರಂಭವಾದರೂ 34ನೇ ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಲವು ಕಡೆಗಳಲ್ಲಿ ಚರಂಡಿಯೇ ಇಲ್ಲ. ಕೆಲವೆಡೆ ಚರಂಡಿಗಳೂ ಹೂಳು ತುಂಬಿ ಮುಚ್ಚಿ ಹೋಗಿದ್ದು, ಅದರ ಮೇಲೆ ಗಿಡ-ಗಂಟಿಗಳು ಆವರಿಸಿವೆ. ಅಲ್ಲದೇ, ಗ್ರಾಪಂ ವ್ಯಾಪ್ತಿಯಲ್ಲಿ ಶೇ.90ರಷ್ಟು ದಾರಿದೀಪಗಳು ಉರಿಯುತ್ತಿಲ್ಲ. ಈ ಎರಡು ಸಮಸ್ಯೆನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News