ಬಾಲಕೋಟ್ ದಾಳಿ ಯೋಜಿಸಿದ ಐಪಿಎಸ್ ಅಧಿಕಾರಿ ಸಮಂತ್ ಗೋಯಲ್ ‘ರಾ’ ಮುಖ್ಯಸ್ಥರಾಗಿ ನೇಮಕ

Update: 2019-06-26 08:42 GMT

ಹೊಸದಿಲ್ಲಿ, ಜೂ.26: ಭಾರತದ ಗುಪ್ತಚರ ಏಜನ್ಸಿ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥರಾಗಿ ಸಮಂತ್ ಗೋಯಲ್ ಹಾಗೂ ಇಂಟಲಿಜೆನ್ಸ್ ಬ್ಯುರೋ ನಿರ್ದೇಶಕರನ್ನಾಗಿ ಅರವಿಂದ್ ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇಮಕ ಮಾಡಿದ್ದಾರೆ.

‘ರಾ’ ಮುಖ್ಯಸ್ಥರಾಗಿ ನೇಮಕಗೊಂಡಿರುವ 1984 ಬ್ಯಾಚಿನ ಪಂಜಾಬ್ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಗೋಯಲ್ ಅವರು ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವಾಯುದಾಳಿ ಹಾಗೂ ಉರಿ ದಾಳಿಯ ನಂತರ 2016ರಲ್ಲಿ ನಡೆದ ಸರ್ಜಿಕಲ್ ದಾಳಿಯನ್ನು ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೆಂಬುದು ಇಲ್ಲಿ ಉಲ್ಲೇಖಾರ್ಹ.

ಗೋಯಲ್ ಅವರು 90ರ ದಶಕದಲ್ಲಿ ಪಂಜಾಬ್ ತೀವ್ರಗಾಮಿ ಸಮಸ್ಯೆ ನಿಭಾಯಿಸಿದವರಲ್ಲದೆ ಪಾಕಿಸ್ತಾನ ವಿಚಾರದ ಪರಿಣತರಾಗಿದ್ದಾರೆ.

ಅರವಿಂದ್ ಕುಮಾರ್ ಅವರು ಅಸ್ಸಾಂ ಮೇಘಾಲಯ ಕೇಡರ್ ನ 1984 ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಅಸ್ಸಾಂನಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿದ ಕುಮಾರ್ ಸೋನಿತ್ ಪುರ್ ಎಸ್‍ಪಿಯಾಗಿದ್ದರು. ನಂತರ ಅವರು ಗುಪ್ತಚರ ಏಜನ್ಸಿಯಲ್ಲಿಯೇ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಅತ್ತ ಸಮಂತ್ ಗೋಯೆಲ್ ಅವರು ತಮ್ಮ ವೃತ್ತಿ ಜೀವನದ ಹೆಚ್ಚಿನ ಭಾಗವನ್ನು ಪಂಜಾಬ್ ನಲ್ಲಿ ಕಳೆದಿದ್ದಾರೆ. 2001ರಲ್ಲಿ ಅವರನ್ನು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಗೆ ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News