"ಡಾ.ಎಸ್.ಕೆ ಕರೀಂ ಖಾನ್ ಸಾಹಿತ್ಯಿಕ-ಸಾಂಸ್ಕೃತಿಕ ಪ್ರಶಸ್ತಿ"ಗೆ ಎಂ.ಡಿ.ಮಂಚಿ ಆಯ್ಕೆ

Update: 2019-06-26 15:38 GMT

ಬಂಟ್ವಾಳ, ಜೂ. 26: ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು, ಹಾಸನ ಜಿಲ್ಲಾ ಘಟಕ, ಸಕಲೇಶಪುರ ತಾಲೂಕು ಘಟಕ ಇವರ ಜಂಟಿ ಆಶ್ರಯದಲ್ಲಿ ಜೂ. 30ರಂದು ಸಕಲೇಶಪುರ ಲಯನ್ಸ್ ಸೇವಾ ಕೇಂದ್ರದಲ್ಲಿ "ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನ" ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ "ಡಾ.ಎಸ್.ಕೆ ಕರೀಂ ಖಾನ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ"ಗೆ ಬಂಟ್ವಾಳ ತಾಲೂಕಿನ ಎಂ.ಡಿ.ಮಂಚಿ ಅವರು ಆಯ್ಕೆಯಾಗಿದ್ದಾರೆ.

ಅನೇಕ ಕವಿಗೋಷ್ಠಿ, ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿರುವ ಇವರು, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ಅಖಿಲ ಭಾರತ ಬಹುಭಾಷಾ ಕವಿ ಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಸುಮಾರು 48 ತುಳು ಹಾಗೂ ಕನ್ನಡ ನಾಟಕ ಬರೆದಿರುವ ಇವರ ಅನೇಕ ಕವನ, ಕವಿತೆ, ಕಥೆ, ಲೇಖನ, ವಿಮರ್ಶೆ, ಚುಟುಕುಗಳು ವಿವಿಧ ಪತ್ರಿಕೆ, ಪುಸ್ತಕ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ನಾಟಕ, ತುಳು ಧಾರಾವಾಹಿ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ದೇಶಕರಾಗಿ, ಸಂಪನ್ಮೂಲ ವ್ಯಕ್ತಿ, ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ.

ವಿವಿಧ ಪುಸ್ತಕ, ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರ ಕವನಗಳು ಮಲಯಾಳಂ ಭಾಷೆಗೆ ತರ್ಜುಮೆಗೊಂಡು ಪ್ರಕಟಗೊಂಡಿವೆ. ಅನೇಕ ಪ್ರಶಸ್ತಿ ಪುರಸ್ಕಾರ ಬಹುಮಾನಗಳಿಗೆ ಭಾಜನರಾಗಿರುವ ಇವರನ್ನು ವಿವಿಧ ಸಂಘ ಸಂಸ್ಥೆ, ಸಂಘಟನೆಗಳು, ಸಮ್ಮೇಳನಗಳು, ಸನ್ಮಾನಿಸಿ ಗೌರವಿಸಿವೆ. ರಾಜ್ಯ ಸಾಹಿತ್ಯ ಚಿಗುರು ಬಳಗದ ಅಧ್ಯಕ್ಷರಾಗಿರುವ ಇವರು, ಮಾರ್ನಬೈಲು ಮೇಲ್ಕಾರ್ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News