ಭಟ್ಕಳ: ಈಜುಕೊಳದ ಗೋಡೆ ಕುಸಿತ

Update: 2019-06-26 15:40 GMT

ಭಟ್ಕಳ: ಇಲ್ಲಿನ ಬಂದರ್ ರಸ್ತೆ 5ನೇ ಕ್ರಾಸ್ ನಲ್ಲಿರುವ ಈಜುಕೊಳವೊಂದರ ಕಂಪೌಂಡ್ ಗೋಡೆಯೊಂದು ಅಕಸ್ಮಿಕವಾಗಿ ಸಂಪೂರ್ಣ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯ ಉಂಟಾಗಿರುವುದಿಲ್ಲ. 

ಈಜುಕೊಳದ  ಕಂಪೌಂಡ್ ಗೋಡೆಯು ಶಿಥಿಲಗೊಂಡಿದ್ದು ಇಂದು ಮುಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬಿದ್ದಿದಿದೆ ಎಂದು ಹೇಳಲಾಗುತ್ತಿದೆ.

ಗೋಡೆ ಕುಸಿತ ಸಂದರ್ಭದಲ್ಲಿ ಮಕ್ಕಳು ಈಜಾಡುತ್ತಿದ್ದು ಗೋಡೆಯು ಈಜುಕೊಳದ ಕಡೆಗೆ ಕುಸಿಯದೆ ಹೊರಗಡೆ ಕುಸಿದು ಬಿದ್ದಿದೆ. ಒಂದು ವೇಳೆ ಈಜು ಕೊಳ ಇರುವ ಕಡೆ ಕುಸಿದಿದ್ದರೆ ಹಲವು ಜೀವಹಾನಿ ಸಂಭವಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೂ ಗೋಡೆ ಕುಸಿತಕ್ಕೆ ಒಂದು ಬೈಕ್ ಹಾಗೂ ಸೈಕಲ್ ನುಜ್ಜುಗುಜ್ಜಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News