×
Ad

ಬ್ಯಾಂಕ್ ವಂಚನೆ: ಸ್ಟರ್ಲಿಂಗ್ ಬಯೋಟೆಕ್‌ನ 9,000ಕೋ.ರೂ. ಆಸ್ತಿ ಜಪ್ತಿ

Update: 2019-06-26 22:40 IST

ಹೊಸದಿಲ್ಲಿ, ಜೂ.26: ಬಹುಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆಗೆ ಸೇರಿದ 9,000 ಕೋ.ರೂ. ಮೌಲ್ಯದ ಆಸ್ತಿಯನ್ನು ಜಾರಿ ಇಲಾಖೆ ಜಪ್ತಿಗೊಳಿಸಿದೆ.

 ಹಣ ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಕೇಂದ್ರ ತನಿಖಾ ಸಂಸ್ಥೆ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿಗೊಳಿಸಲಾದ ಆಸ್ತಿಯ ಮೌಲ್ಯ 9,778ಕೋ.ರೂ. ಎಂದು ಅವರು ತಿಳಿಸಿದ್ದಾರೆ. ಔಷಧಿ ಕಂಪೆನಿಯು ಆಂಧ್ರ ಬ್ಯಾಂಕ್‌ ನೇತೃತ್ವದ ಬ್ಯಾಂಕ್‌ಗಳ ಸಮೂಹದಿಂದ 5,000ಕೋ.ರೂ. ಸಾಲ ಪಡೆದುಕೊಂಡಿತ್ತು. ನಂತರ ಇದು ಅನುತ್ಪಾದಕ ಸಾಲವಾಗಿ ಪರಿವರ್ತನೆಗೊಂಡಿತ್ತು.

 ಸಾಲ ವಂಚನೆಯ ಒಟ್ಟು ಮೊತ್ತ 8,100ಕೋ.ರೂ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬ್ಯಾಂಕ್ ಸಾಲದ ಪ್ರಮುಖ ಸಂಚುಗಾರರು ಸ್ಟರ್ಲಿಂಗ್ ಬಯೋಟೆಕ್‌ನ ಮಾಲಕರಾಗಿರುವ ವಡೋದರ ಮೂಲದ ಸಂದರೇಸ ಸಹೋದರರು ಎಂದು ಹೇಳಲಾಗಿದ್ದು ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News