ಪಂದ್ಯ ಆರಂಭಕ್ಕೂ ಮುನ್ನ ಸ್ಟೇಡಿಯಂ ಹೊರಗೆ ಹೊಡೆದಾಡಿಕೊಂಡ ಪಾಕ್- ಅಫ್ಘಾನ್ ಅಭಿಮಾನಿಗಳು

Update: 2019-06-29 15:22 GMT

ಲೀಡ್ಸ್, ಜೂ.29: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಶನಿವಾರ ನಡೆದ ವಿಶ್ವಕಪ್ ಪಂದ್ಯಕ್ಕಿಂತ ಮೊದಲು ಹೊಡೆದಾಟ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಕ್ರಿಕೆಟ್ ಅಭಿಮಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಐಸಿಸಿ ಎಚ್ಚರಿಕೆ ನೀಡಿದೆ.

ಸ್ಟೇಡಿಯಂನ ಹೊರಗೆ ಉಭಯ ತಂಡಗಳ ಬೆಂಬಲಿಗರು ಹೊಡೆದಾಡಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭದ್ರತಾ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಹೊಡೆದಾಟವನ್ನು ನಿಲ್ಲಿಸಿದ್ದು,ಕನಿಷ್ಠ ಇಬ್ಬರು ಕ್ರಿಕೆಟ್ ಅಭಿಮಾನಿಯನ್ನು ಮೈದಾನದಿಂದ ಹೊರಹಾಕಲಾಗಿದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ.

ನಾವು ಈ ರೀತಿಯ ವರ್ತನೆಯನ್ನು ಸಹಿಸಿಕೊಳ್ಳಲಾರೆವು. ಅಭಿಮಾನಿಗಳ ಕ್ರಿಕೆಟ್ ರಸಭಂಗಕ್ಕೆ ಅಡ್ಡಿಪಡಿಸುವ ಎಲ್ಲ ಸಾಮಾಜಿಕ ವಿರೋಧಿ ಚಟುವಟಿಕೆಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಐಸಿಸಿ ತಿಳಿಸಿದೆ.

‘ಜಸ್ಟಿಸ್ ಫಾರ್ ಬಲೂಚಿಸ್ತಾನ’ ಸಂದೇಶವಿರುವ ವಿಮಾನವೊಂದು ಸ್ಟೇಡಿಯಂ ಮೇಲೆ ಹಾದುಹೋದ ಬಳಿಕ ಗಲಾಟೆ ಆರಂಭವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News