17 ಒಬಿಸಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ ಆದಿತ್ಯನಾಥ್ ಸರಕಾರ

Update: 2019-06-29 15:59 GMT

ಲಕ್ನೋ, ಜೂ. 29: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ 17 ಇತರ ಹಿಂದುಳಿದ ಜಾತಿ (ಒಬಿಸಿ) ಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ್ದಾರೆ. ಶುಕ್ರವಾರ ತಡ ರಾತ್ರಿಯಿಂದ ಈ ನಿರ್ಧಾರ ಅಸ್ತಿತ್ವಕ್ಕೆ ಬಂದಿದೆ. 17 ಒಬಿಸಿ ಜಾತಿಗಳಿಗೆ ಸೇರಿದ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಹಿಂದುಳಿದ ಜಾತಿಗಳಿಗೆ (ಒಬಿಸಿ) ಸೇರಿದ ನಿಷದ್, ಬಿಂದ್, ಮಲ್ಲಾಹ್, ಕೇವತ್, ಕಶ್ಯಪ, ಭಾರ್, ಧೀವಾರ್, ಬಾಥಮ್, ಮಚುವಾ, ಪ್ರಜಾಪತಿ, ರಾಜ್‌ಭರ್, ಕಹಾರ್, ಪೊಟ್ಟರ್, ಧೀಮರ್, ಮಾಂಜಿ, ತುಹಾಹಾ ಹಾಗೂ ಗೌರ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ.

ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವಾಗಿ ಆದಿತ್ಯನಾಥ್ ಸರಕಾರ ಈ ಕ್ರಮ ಕೈಗೊಂಡಿದೆ.

 ಕಳೆದ 15 ವರ್ಷಗಳಿಂದ ಈ 15 ಜಾತಿಗಳು ತಮ್ಮ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸುವಂತೆ ಆಗ್ರಹಿಸುತ್ತಾ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News