ಬೌಲ್ಟ್ ಹ್ಯಾಟ್ರಿಕ್: ಕಿವೀಸ್ ಗೆ 244 ರನ್ ಗುರಿ ನೀಡಿದ ಆಸ್ಟ್ರೇಲಿಯ

Update: 2019-06-29 16:24 GMT

ಲಂಡನ್, ಜೂ.29: ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಪ್ರಹಾರಕ್ಕೆ ಬೆದರಿದ ಆಸ್ಟ್ರೇಲಿಯ ಶನಿವಾರ ವಿಶ್ವಕಪ್‌ನ 37ನೇ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 243 ರನ್ ಗಳಿಸಿದೆ.

ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ (88) ಮತ್ತು ವಿಕೆಟ್ ಕೀಪರ್ ಅಲೆಕ್ಸ್ ಕಾರಿ(71) ಅರ್ಧಶಕಗಳನ್ನು ಗಳಿಸುವ ಮೂಲಕ ಆಸ್ಟ್ರೇಲಿಯದ ಪರ ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು. ಡೇವಿಡ್ ವಾರ್ನರ್ (16), ಮಾರ್ಕುಸ್ ಸ್ಟೋನಿಸ್(21) ಪ್ಯಾಟ್ ಕಮಿನ್ಸ್ (23) ಎರಡಂಕೆಯ ನೆರವು ನೀಡಿದರು.

ಕೊನೆಯಲ್ಲಿ ನ್ಯೂಝಿಲೆಂಡ್‌ನ ವೇಗಿ ಟ್ರೆಂಟ್ ಬೌಲ್ಟ್ ಅವರು ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ , ಮಿಚೆಲ್ ಸ್ಟಾರ್ಕ್(0), ಮತ್ತು ಜೇಸನ್ ಬೆಹ್ರನ್‌ಡಾರ್ಫ್ (0) ವಿಕೆಟ್ ಉಡಾಯಿಸುವ ಮೂಲಕ ಹ್ಯಾಟ್ರಿಕ್ ಗಳಿಸಿದರು. ಅವರು 51ಕ್ಕೆ 4 ವಿಕೆಟ್ ಪಡೆದರು.

2019ರ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ಶಮಿ ಈ ಮೊದಲು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News