×
Ad

ಉ.ಪ್ರದೇಶ ಸರಕಾರ ಕ್ರಿಮಿನಲ್‌ಗಳ ಎದುರು ಮಂಡಿಯೂರಿದೆಯೇ: ಪ್ರಿಯಾಂಕಾ ಪ್ರಶ್ನೆ

Update: 2019-06-29 23:49 IST

ಲಕ್ನೊ, ಜೂ.29: ಉ.ಪ್ರದೇಶದಲ್ಲಿ ಕ್ರಿಮಿನಲ್‌ಗಳು ಮುಕ್ತವಾಗಿ, ಆರಾಮವಾಗಿ ತಿರುಗಾಡುತ್ತಿದ್ದಾರೆ . ತಮಗಿಷ್ಟ ಬಂದಂತೆ ನಡೆಯುತ್ತಿದ್ದಾರೆ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ರಾಜ್ಯದ ಆದಿತ್ಯನಾಥ್ ಸರಕಾರ ಕ್ರಿಮಿನಲ್‌ಗಳ ಎದುರು ಮಂಡಿಯೂರಿದೆಯೇ ಎಂದು ಪ್ರಶ್ನಿಸಿದ್ದಾರೆ.

ಉತ್ತರಪ್ರದೇಶ ರಾಜ್ಯದದೆಲ್ಲೆಡೆ ಕ್ರಿಮಿನಲ್‌ಗಳು ಮುಕ್ತವಾಗಿ ತಿರುಗುತ್ತಿದ್ದಾರೆ. ಕ್ರಿಮಿನಲ್ ಪ್ರಕರಣಗಳು ನಿರಂತರ ವರದಿಯಾಗುತ್ತಿದ್ದರೂ ಇದು ಬಿಜೆಪಿ ಸರಕಾರದ ಕಿವುಡು ಕಿವಿಗಳಿಗೆ ಕೇಳಿಸುತ್ತಿಲ್ಲ ಎಂದು ಟ್ವೀಟ್ ಮಾಡಿರುವ ಪ್ರಿಯಾಂಕಾ, ಉತ್ತರ ಪ್ರದೇಶ ಸರಕಾರ ಕ್ರಿಮಿನಲ್‌ಗಳೆದುರು ಮಂಡಿಯೂರಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಆದಿತ್ಯನಾಥ್ ಸರಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದ ಸಮಾಜವಾದಿ ಪಕ್ಷವು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ಹೆಚ್ಚಿದೆ ಎಂದು ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News