×
Ad

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಹಸ್ತಾಂತರ ವೇಳೆ ಕಣ್ಣೀರಿಟ್ಟ ಛತ್ತೀಸ್‍ಗಢ ಸಿಎಂ

Update: 2019-06-30 16:04 IST
ಚಿತ್ರ ಕೃಪೆ: ANI

ರಾಯಪುರ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಹಸ್ತಾಂತರಿಸುವ ವೇಳೆ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕಣ್ಣೀರಿಟ್ಟ ಘಟನೆ ನಡೆದಿದೆ.

ಛತ್ತೀಸ್‍ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನವನ್ನು ಮೋಹನ್ ಮಾರ್ಕಮ್ ಅವರಿಗೆ ಹಸ್ತಾಂತರಿಸುವ ವೇಳೆ ಬಘೇಲ್ ಅಕ್ಷರಶಃ ಕಣ್ಣೀರಿಟ್ಟರು. ಕಾಂಗ್ರೆಸ್ ಮುಖಂಡ ಪಿ.ಎಲ್.ಪೂನಿಯಾ ಕೂಡಾ ಉಪಸ್ಥಿತರಿದ್ದರು.

ಕಳೆದ ಐದು ವರ್ಷಗಳಿಂದ ತಮ್ಮ ಜತೆ ದುಡಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಛತ್ತೀಸ್‍ಗಢದಲ್ಲಿ ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

2013ರಲ್ಲಿ ಚುನಾವಣೆ ಸೋತ ಬಳಿಕ ರಾಹುಲ್‍ ಗಾಂಧಿಯವರು ನನ್ನನ್ನು ನೇಮಿಸಿದರು. 2014ರ ಲೋಕಸಭಾ ಚುನಾವಣೆ ಸನಿಹದಲ್ಲಿತ್ತು. 2014ರ ಚುನಾವಣೆ ಬಳಿಕ ಪಕ್ಷದ ಭವಿಷ್ಯದ ಬಗ್ಗೆ ನಮಗೆ ಆತಂಕ ಇತ್ತು. ಅಂದು ಆರಂಭಿಸಿದ ಕಾಂಗ್ರೆಸ್ ಮುಖಂಡರ ಹೋರಾಟ ಛತ್ತೀಸ್‍ಗಢದಲ್ಲಿ ಅಧಿಕಾರಕ್ಕೇರುವವರೆಗೂ ಮುಂದುವರಿಯಿತು ಎಂದು ಬಣ್ಣಿಸಿದರು.

ತಮ್ಮ ನೂತನ ಉತ್ತರಾಧಿಕಾರಿಯನ್ನು ಕಠಿಣ ಪರಿಶ್ರಮಿ ಹಾಗೂ ಸರಳ ವ್ಯಕ್ತಿ ಎಂದು ಹೊಗಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News