×
Ad

ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್: ಅಪಾಯದಿಂದ ಪಾರಾದ ಬಿಜೆಪಿ ಸಂಸದ

Update: 2019-06-30 16:09 IST

ಹೊಸದಿಲ್ಲಿ: ಅಲ್ವಾರ್ ಸಂಸದ ಮಹಾಂತ್ ಬಾಲಕ್‍ನಾಥ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಆತಂಕ ಸೃಷ್ಟಿಯಾದ ಘಟನೆ ವರದಿಯಾಗಿದೆ. ಹೆಲಿಕಾಪ್ಟರ್ ಹಲವು ಸೆಕೆಂಡ್‍ಗಳ ಕಾಲ ಓಲಾಡುತ್ತಿದ್ದ ಬಗೆಗಿನ ವೀಡಿಯೊವನ್ನು ಎಎನ್‍ಐ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ. ಬಳಿಕ ಹೆಲಿಕಾಪ್ಟರ್ ಮತ್ತೆ ನಿಯಂತ್ರಣಕ್ಕೆ ಬಂತು.

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಲಕನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸಿಂಗ್ ವಿರುದ್ಧ ಜಯ ಸಾಧಿಸಿದ್ದರು. ಬಾಲಕನಾಥ್ ಅವರು, 2017ರಲ್ಲಿ ಮೃತರಾಗುವವರೆಗೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಹಾಂತ್‍ಚಂದ್ ನಾಥ್ ಅವರ ಅನುಯಾಯಿ. ಬಳಿಕ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕರಣ್ ಸಿಂಗ್ ಯಾದವ್ ಅವರು ಜಯ ಸಾಧಿಸಿದ್ದರು. ಅಂದಿನ ಮುಖ್ಯಮಂತ್ರಿ ವಸುಂಧರ ರಾಜೇ ಅವರ ವಿರುದ್ಧದ ಸಿಟ್ಟನ್ನು ಬಿಜೆಪಿ ಕಾರ್ಯಕರ್ತರು ಹೊರಹಾಕಿದ್ದು, ಬಿಜೆಪಿಯ ಆಘಾತಕಾರಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News