ಜು. 6ರಂದು ಕೃಷ್ಣಾಪುರದಲ್ಲಿ ಹಜ್ ತರಬೇತಿ ಶಿಬಿರ

Update: 2019-07-01 06:00 GMT

ಕೃಷ್ಣಾಪುರ: ಬದ್ರಿಯಾ ಜುಮಾ ಮಸೀದಿ ಕೃಷ್ಣಾಪುರ 7 ನೇ ಬ್ಲಾಕ್ ಇದರ ಆಡಳಿತಕ್ಕೊಳಪಟ್ಟ ಅಲ್ ಮದ್ರಸತುಲ್ ಬದ್ರಿಯಾ ಕೇಂದ್ರ ಮದ್ರಸ ಸಮಿತಿ ಆಶ್ರಯದಲ್ಲಿ ಜು. 6ರಂದು ಬೆಳಗ್ಗೆ 9 ರಿಂದ ಹಜ್ ತರಬೇತಿ ಶಿಬಿರ ನಡೆಯಲಿದೆ.

ಗೌರವಾನ್ವಿತ ಖಾಝಿ ಮೌಲಾನಾ ಅಲ್ ಹಾಜ್ ಇಬ್ರಾಹಿಂ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಲ್ ಹಾಜ್ ಮೌಲಾನ ಜಿ.ಎಮ್. ಮುಹಮ್ಮದ್ ಸಖಾಫಿ  ಹಜ್ ತರಬೇತಿ ಶಿಬಿರ ನಡೆಸಲಿದ್ದಾರೆ.

ಜಮಾಅತ್ ಅಧ್ಯಕ್ಷ ಬಿ.ಎಮ್. ಮುಮ್ತಾಝ್ ಆಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಾತ್ರಾರ್ಥಿಗಳಿಗೆ ಊಟೋಪಚಾರ, ಮಹಿಳೆಯರಿಗೆ ನಮಾಝ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮಝರ್  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 74116 27032 ಮತ್ತು 99642 45246 ನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News