×
Ad

ಹಿಂದೂಗಳು ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರಗೈಯಬೇಕು ಎಂದ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ

Update: 2019-07-01 13:58 IST

ಹೊಸದಿಲ್ಲಿ, ಜು.1: “ಹಿಂದೂ ಪುರುಷರು ಮುಸ್ಲಿಮರ ಮನೆಗಳನ್ನು ಪ್ರವೇಶಿಸಿ ಮಹಿಳೆಯರ ಮೇಲೆ ಅತ್ಯಾಚಾರಗೈಯ್ಯಬೇಕು” ಎಂದು ಉತ್ತರ ಪ್ರದೇಶದ ರಾಮ್ಕೊಲ ಎಂಬಲ್ಲಿನ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಸುನೀತಾ ಸಿಂಗ್ ಗೌರ್ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಆಕೆಯನ್ನು ಹುದ್ದೆಯಿಂದ ಪಕ್ಷವು ಉಚ್ಛಾಟಿಸಿದೆ.

“ಅವರಿಗೆ (ಮುಸ್ಲಿಮರಿಗೆ) ಒಂದೇ ಪರಿಹಾರವಿದೆ. ಹಿಂದೂ ಸೋದರರು ಹತ್ತು ಮಂದಿಯ ಗುಂಪು ಮಾಡಿಕೊಂಡು ಅವರ (ಮುಸ್ಲಿಮರ) ತಾಯಂದಿರು ಹಾಗೂ ಸಹೋದರಿಯರನ್ನು ಬಹಿರಂಗವಾಗಿ ರಸ್ತೆಗಳಲ್ಲಿಯೇ ಸಾಮೂಹಿಕ ಅತ್ಯಾಚಾರಗೈದು ನಂತರ  ಅವರನ್ನು ಮಾರುಕಟ್ಟೆಯ ಮಧ್ಯದಲ್ಲಿ ಇತರರಿಗೆ ಕಾಣುವಂತೆ ಗಲ್ಲಿಗೇರಿಸಬೇಕು'' ಎಂದು  ಗೌರ್ ಹಿಂದಿ ಭಾಷೆಯಲ್ಲಿ ಫೇಸ್ ಬುಕ್ ಪೋಸ್ಟ್ ಮಾಡಿದ್ದರು.

``ಭಾರತವನ್ನು ರಕ್ಷಿಸಲು ಬೇರೆ ಯಾವುದೇ ಮಾರ್ಗವಿರದೇ ಇರುವುದರಿಂದ ಮುಸ್ಲಿಮರ ತಾಯಂದಿರ ಹಾಗೂ ಸೋದರಿಯರ ಮಾನಭಂಗ'' ಮಾಡಬೇಕೆಂದೂ ಆಕೆ ಬರೆದಿದ್ದರು.

ಈ ನಿರ್ದಿಷ್ಟ ಪೋಸ್ಟ್ ಗಳನ್ನು ಇದೀಗ ಡಿಲೀಟ್ ಮಾಡಲಾಗಿದೆಯಾದರೂ ಅದರ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಿಜಯಾ ರಹತ್ಕರ್, ಇಂತಹ ದ್ವೇಷಯುಕ್ತ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಹಾಗೂ ಗೌರ್ ಳನ್ನು ಉಚ್ಛಾಟಿಸಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News