ಮುಕ್ತ ವಿವಿ ಪರೀಕ್ಷಾ ದಿನಾಂಕ ವಿಸ್ತರಣೆ

Update: 2019-07-01 15:38 GMT

ಉಡುಪಿ, ಜು.1: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಉಡುಪಿ ಮತ್ತು ಮಂಗಳೂರು ಇಲ್ಲಿ 2018-19ನೇಮತ್ತು 2011-12 ಹಾಗೂ 2012-13ರ ಶ್ಯೆಕ್ಷಣಿಕ ಸಾಲಿನಲ್ಲಿ ಪ್ರವೇಶ ಹೊಂದಿರುವ ಪ್ರಥಮ ಬಿ.ಎ/ಬಿ.ಕಾಂ/ಬಿ.ಲಿಬ್.ಐ.ಎಸ್ಸಿ/ಎಂ.ಕಾಂ/ಎಂ.ಲಿಬ್.ಐಎಸ್ಸಿ ಮತ್ತು ಎಂಸ್ಸಿ (ಪ್ರಥಮ ಸೆಮಿಸ್ಟರ್) ವಿದ್ಯಾರ್ಥಿಗಳಿಗೆ ಜು.22ರಿಂದ ಕರಾಮುವಿಯ ಪರೀಕ್ಷೆಗಳು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಲಿದೆ.

ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ಕಟ್ಟಲು ಇದ್ದ ಕೊನೆಯ ದಿನಾಂಕವನ್ನು (ಜೂ.19 ದಂಡವಿಲ್ಲದೇ ಹಾಗೂ ಜೂ.29 ದಂಡ ಶುಲ್ಕ ಸಹಿತ) ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ದಂಡ ಶುಲ್ಕದೊಂದಿಗೆ ಜು.6ರವರೆಗೆ ಪರೀಕ್ಷೆ ಕಟ್ಟಲು ಕಡೆಯ ದಿನವನ್ನು ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳು -www.ksoumysore.karnataka.gov.in- ಆನ್‌ಲ್ಯೆನ್ ನಲ್ಲಿ ಮತ್ತು ಆಫ್‌ಲ್ಯೆನ್ ಎರಡು ವಿಧದಲ್ಲೂ ಪರೀಕ್ಷೆಯನ್ನು ಕಟ್ಟಬಹುದಾಗಿದೆ. ಪರೀಕ್ಷೆ ಶುಲ್ಕ ಕಟ್ಟಿದ ವಿದ್ಯಾರ್ಥಿಗಳು ಅರ್ಜಿಯನ್ನು ಎನ್.ಬಿ.ಕುಮಾರ್, ಉಪ ಕುಲಸಚಿವರು. ಪರೀಕ್ಷಾ ವಿಭಾಗ, ಕರಾಮುವಿ, ಮುಕ್ತ ಗಂಗೋತ್ರಿ, ಮ್ಯೆಸೂರು ಇವರಿಗೆ ಕಳುಹಿಸಿಕೊಡಲು ಸೂಚಿಸಲಾಗಿದೆ.

2011-12ರಲ್ಲಿ ಪ್ರವೇಶ ಹೊಂದಿರುವ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಇದು ಅಂತಿಮ ಅವಕಾಶವಾಗಿದೆ ಎಂದು ಜಿಲ್ಲಾ ಕರಾಮುವಿ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ.ಮಹಾಲಿಂಗಯ್ಯ ಕಲ್ಕುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News