ಬೆಳಪು : ವಿವಿಧ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ರೂ. 55.70 ಲಕ್ಷ ಅನುದಾನ ಬಿಡುಗಡೆ

Update: 2019-07-01 16:52 GMT

ಪಡುಬಿದ್ರಿ: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಸಮಾಜದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಅದಾನಿ ಯು.ಪಿ.ಸಿ.ಎಲ್‍ನ ಸಿಎಸ್‍ಆರ್ ಅನುದಾನದಿಂದ ರೂ. 55.70 ಲಕ್ಷ ಅನುದಾನ ವಿವಿಧ ಯೋಜನೆಗಳ ಮುಖಾಂತರ ಬಿಡುಗಡೆಗೊಂಡಿದೆ.

ಬೆಳಪು ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿಯವರ ಶಿಫಾರಸ್ಸಿನಂತೆ ಯು.ಪಿ.ಸಿ.ಎಲ್‍ನಿಂದ ಬೆಳಪುವಿನ ಸುವರ್ಣ ಸೌಧದಲ್ಲಿ ಹವಾನಿಯಂತ್ರಿತ ಲೈಬ್ರೆರಿ ಗ್ರಾಮೀಣ ಮಟ್ಟದಲ್ಲಿ ನಿರ್ಮಾಣ ಮಾಡುವ ಉದ್ದೇಶವಿದ್ದು, ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕೆ ಪುಸ್ತಕ, ಅಂತರ್ಜಾಲದ ಮೂಲಕ ಲೈಬ್ರೆರಿ ನಿರ್ಮಿಸುವ ಬಗ್ಗೆ 5.00 ಲಕ್ಷ ಅನುದಾನ ಬಿಡುಗಡೆಗೊಂಡಿದೆ.

ಪಣಿಯೂರು ಮಲೈ ಜುಮಾದಿ ದೈವಸ್ಥಾನದ ಅಭಿವೃದ್ಧಿಗೆ 6.70 ಲಕ್ಷ, ಬೆಳಪು ಜಾರಂದಾಯ ದೈವಸ್ಥಾನದ ಅಭಿವೃದ್ಧಿಗೆ 8.00 ಲಕ್ಷ, ಪಣಿಯೂರು ವಿಶ್ವಕರ್ಮ ಭಜನಾ ಮಂದಿರ ಅಭಿವೃದ್ಧಿಗೆ 5 ಲಕ್ಷ, ಬೆಳಪು ಮಳಂಗೋಳಿಯ ಪುರಾತನ ಶಿವಾಲಯ ಅಭಿವೃದ್ಧಿಗೆ 5.00 ಲಕ್ಷ, ಬೆಳಪು ಬದ್ರಿಯಾ ಮಸೀದಿ ಅಭಿವೃದ್ಧಿಗೆ 9.00 ಲಕ್ಷ, ಪಣಿಯೂರು ಶಾಲಾ ಮೈದಾನದ ಆವರಣಗೋಡೆ ನಿರ್ಮಾಣ 8.30 ಲಕ್ಷ, ಬೆಳಪು ಪಂಚಾಯತ್ ಆವರಣ ಗೋಡೆ ರಚನೆಗೆ 8.70 ಲಕ್ಷ ಅನುದಾನ ಯೋಜನಾ ಅನುಷ್ಠಾನಕ್ಕೆ ಬಿಡುಗಡೆಗೊಂಡಿದೆ.

ಬೆಳಪು ಬಬ್ಬುಸ್ವಾಮಿ ದೈವಸ್ಥಾನದ ಆವರಣಗೋಡೆಗೆ 5 ಲಕ್ಷ ಅನುದಾನ ಮಾಜಿ ಶಾಸಕ ವಿನಯಕುಮಾರ ಸೊರಕೆಯವರ ಶಿಫಾರಸ್ಸಿನಂತೆ ಮಂಜೂರಾಗಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News