ಉತ್ತರ ಪ್ರದೇಶ ಕಾಂಗ್ರೆಸ್‌ನಲ್ಲಿ ಒಳಜಗಳ: ಶಿಸ್ತು ಸಮಿತಿಯಿಂದ ವರದಿ ಕೇಳಿದ ಪ್ರಿಯಾಂಕಾ ಗಾಂಧಿ

Update: 2019-07-02 17:19 GMT

ಲಕ್ನೋ, ಜು.2: ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನುಭವಿಸಿರುವ ಹೀನಾಯ ಸೋಲಿಗೆ ಪಕ್ಷದಲ್ಲಿನ ಒಳಜಗಳ ಮತ್ತು ಕಾರ್ಯಕರ್ತರು ಮತ್ತು ನಾಯಕರ ಮಧ್ಯೆ ಸಮನ್ವಯದ ಕೊರತೆಯೂ ಕಾರಣವಾಗಿದೆ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಜುಲೈ 15ರ ಒಳಗಾಗಿ ವರದಿ ನೀಡುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರ ತ್ರಿಸದಸ್ಯ ಶಿಸ್ತು ಸಮಿತಿಗೆ ಸೂಚಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಪುನರ್‌ನಿರ್ಮಿಸುವ ಪ್ರಕ್ರಿಯೆಯನ್ನು ಆರಂಭಿಸಿರುವ ಪ್ರಿಯಾಂಕಾ ಎಲ್ಲ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿದ್ದಾರೆ. ಮುಂದಿನ ಉಪಚುನಾವಣೆಗೂ ಆಕೆ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಸದ್ಯ ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲೂ ಅವರನ್ನು ಪೂರ್ವ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಪುನರ್‌ನಿರ್ಮಿಸುವ ಉಸ್ತುವಾರಿಯಾಗಿ ಪ್ರಿಯಾಂಕಾ ನೇಮಿಸಿದ್ದಾರೆ.

ಜಿಲ್ಲೆಗಳಲ್ಲಿ ಸಾಂಸ್ಥಿಕ ರಚನೆಯ ಕೊರತೆಯಿದೆ ಎಂದು ಕೆಲವು ಲೋಕಸಭಾ ಅಭ್ಯರ್ಥಿಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಜುಲೈ 15ರ ಒಳಗಾಗಿ ವರದಿಯನ್ನು ನೀಡುವಂತೆ ಮಾಜಿ ಶಾಸಕರಾದ ಅನುಗ್ರಹ ನಾರಾಯಣ ಸಿಂಗ್, ವಿನೋದ್ ಚೌದರಿ ಮತ್ತು ರಾಮ್ ಜಿಯವನ್ ಅವರ ತ್ರಿಸದ್ಯ ಶಿಸ್ತು ಸಮಿತಿಗೆ ಪ್ರಿಯಾಂಕಾ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News