×
Ad

ರತ್ನಗಿರಿಯಲ್ಲಿ ಅಣೆಕಟ್ಟು ಒಡೆದು 6 ಮಂದಿ ಮೃತ್ಯು, ಕನಿಷ್ಟ 16 ಜನ ನಾಪತ್ತೆ

Update: 2019-07-03 10:17 IST

 ಪುಣೆ, ಜು.3: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲೂನ್ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಮಂಗಳವಾರ ರಾತ್ರಿ ತಿವಾರೆ ಅಣೆಕಟ್ಟು ಒಡೆದುಹೋದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು,ಕನಿಷ್ಠ ಪಕ್ಷ 16 ಜನರು ನಾಪತ್ತೆಯಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆೆಯಾಗುತ್ತಿದ್ದು ಮಂಗಳವಾರ ರಾತ್ರಿ 10ರ ಸುಮಾರಿಗೆ ಅಣೆಕಟ್ಟು ಕುಸಿದುಬಿದ್ದಿರುವ ಘಟನೆ ನಡೆದಿತ್ತು. ನಾಪತ್ತೆಯಾಗಿರುವ ಜನರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಭೀತಿ ವ್ಯಕ್ತಪಡಿಸಿದ್ದಾರೆ.

 ತಿವಾರೆ ಅಣೆಕಟ್ಟಿನ ಕೆಳ ಭಾಗದಲ್ಲಿರುವ ಕನಿಷ್ಠ ಏಳು ಗ್ರಾಮಗಳ ಸಂಪರ್ಕ ಕಡಿತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸ್, ಜಿಲ್ಲಾ ವಿಪತ್ತುನಿರ್ವಹಣಾ ತಂಡ, ಅಗ್ನಿ ಶಾಮಕ ದಳದವರು ಸ್ಥಳೀಯ ಗ್ರಾಮಸ್ಥರ ನೆರವಿನಿಂದ ನಾಪತ್ತೆಯಾದವರ ಶೋಧದಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News