ಕೋಟೆಕಾರ್: ಹಾರೂನ್ ಉಸ್ತಾದ್ ಶಿಷ್ಯಂದಿರ ಸ್ನೇಹ ಸಂಗಮ ಕಾರ್ಯಕ್ರಮ

Update: 2019-07-03 11:35 GMT

ಕೋಟೆಕಾರ್, ಜು.3: ಮಖ್ದೂಮಿಯ ಶರೀಅತ್ ಕಾಲೇಜು ಕೋಟೆಕಾರ್ ಇದರ ಸ್ಥಾಪಕರಾದ ಹಾರೂನ್ ಅಹ್ಸನಿ ಉಸ್ತಾದರ ಶಿಷ್ಯಂದಿರ ಸಂಘಟನೆ 'ನಿಬ್ರಾಸುಲ್ ಉಲಮಾ'ದ ಸ್ನೇಹ ಸಂಗಮ ಕಾರ್ಯಕ್ರಮ ಮಂಗಳವಾರ ನಡೆಯಿತು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಝೈನ್ ಸಖಾಫಿ ಸ್ವಾಗತಿಸಿ, ಅಶ್ರಫ್ ಅಹ್ಸನಿ ಅಲ್ ಅಫ್ಳಲಿ ಸಭೆಯನ್ನು ಉದ್ಘಾಟಿಸಿದರು. ನಿಬ್ರಾಸ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅಹ್ಸನಿ ಅಧ್ಯಕ್ಷೀಯ ಮಾತುಗಳನ್ನಾಡಿ, ಹಾರಿಸ್ ಸಖಾಫಿ ಪ್ರಾಸ್ತಾವಿಕ ಭಾಷಣಗೈದರು.

ಹಾರೂನ್ ಅಹ್ಸನಿ ಉಸ್ತಾದ್ ಅವರಿಂದ ತರಗತಿ ನಡೆಯಿತು. ಜೀವನದ ಯಶಸ್ವಿಗೆ ಬೇಕಾಗಿ ನಾವು ಮಾಡಬೇಕಾದ ಕಾರ್ಯ ವೈಖರಿಗಳನ್ನು ಬೊಟ್ಟು ಮಾಡಿಕೊಂಡು ಇಹಪರ ವಿಜಯ ಹೇಗೆ ಸಾಧ್ಯ? ಅದಕ್ಕಾಗಿ ನಾವು ಮಾಡಬೇಕಾದ ಕೆಲಸ ಕಾರ್ಯಗಳನ್ನು ವಿವರಿಸಿದರು.

ನಂತರ ನಿಬ್ರಾಸುಲ್ ಉಲಮಾ ಇದರ ನೂತನ ಕಮಿಟಿ ರಚಿಸಲಾಯಿತು.

ಸಲಹಾ ಸಮಿತಿ ಚೆರ್ಮ್ಯಾನ್ ಶೈಖುನಾ ಹಾರೂನ್ ಉಸ್ತಾದ್, ಅಧ್ಯಕ್ಷರಾಗಿ ಝೈನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಖಲೀಲ್ ಅಂಜದಿ, ಕೋಶಾಧಿಕಾರಿ ಹಾರಿಸ್ ಸಖಾಫಿ ಮಂಜನಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಹಾಫಿಲ್ ನಈಮಿ ಬೆಳ್ಮ ಇವರನ್ನು ನೇಮಿಸಲಾಯಿತು.

ಉಪಾಧ್ಯಕ್ಷರಾಗಿ ಶಮೀಂ ಸಖಾಫಿ, ಸಿದ್ದೀಕ್ ಅಹ್ಸನಿ, ಅಮೀನ್ ಮಖ್ದೂಮಿ, ಜೊತೆ ಕಾರ್ಯದರ್ಶಿಯಾಗಿ ಜುನೈದ್ ಮಖ್ದೂಮಿ, ಶೌಖತ್ ಸಖಾಫಿ, ಹಾರಿಸ್ ಸಖಾಫಿ ಮಂಜೇರಿ ನೂತನ ಕಮಿಟಿಯನ್ನು ಪದಗ್ರಹಣ ಮಾಡುವುದರೊಂದಿಗೆ ಪ್ರತಿಯೊಬ್ಬ ಸದಸ್ಯರ ಅನುಭವ ಹಂಚಿಕೆಗಳೊಂದಿಗೆ ಸಂಗಮವು ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News