ಎಚ್‌ಐವಿ ನಿವಾರಣೆಯಲ್ಲಿ ಪ್ರಮುಖ ಮೈಲಿಗಲ್ಲು: ಡಿಎನ್‌ಎಯಿಂದ ಸೋಂಕಿತ ಕೋಶಗಳನ್ನು ಅಳಿಸಿದ ಸಂಶೋಧಕರು

Update: 2019-07-03 15:03 GMT

ಒಮಹ, ಜು.3: ಇದೇ ಮೊದಲ ಬಾರಿ ಸೋಂಕಿತ ಇಲಿಯ ಡಿಎನ್‌ಎಯಿಂದ ಎಚ್‌ಐವಿ ಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಮೂಲಕ ಎಚ್‌ಐವಿ ನಿವಾರಣೆಯಲ್ಲಿ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ.

 ಫಿಲಡೆಲ್ಫಿಯದ ಟೆಂಪಲ್ ವಿಶ್ವವಿದ್ಯಾನಿಲಯದ ಲೂಯಿಸ್ ಕಟ್ಸ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಅಮೆರಿಕದ ಒಹಮದ ನೆಬ್ರಸ್ಕ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇದೊಂದು ಅಭೂತಪೂರ್ವ ಸಾಧನೆ ಎಂದು ವ್ಯಾಖ್ಯಾನಿಸಿದ್ದಾರೆ. ಈ ಕುರಿತು ನೇಚರ್ ಕಮ್ಯೂನಿಕೇಶನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದಲ್ಲಿ, ಲೇಸರ್ ಆರ್ಟ್ ಎಂದು ಕರೆಯಲಾಗುವ ಔಷಧಿಯ ಬಳಕೆಯನ್ನು ಇತರ ಕೆಲವು ಸಾಧನಗಳ ಜೊತೆ ಇಲಿಯ ಮೇಲೆ ಪ್ರಯೋಗಿಸಿದಾಗ ಎಚ್‌ಐವಿ ಸೋಂಕನ್ನು ಅದರ ಡಿಎನ್‌ಎಯಿಂದ ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.

 ಏಡ್ಸ್ ಮಹಾಮಾರಿ ಪತ್ತೆಯಾಗಿ 40 ವರ್ಷಗಳ ನಂತರ ಎಚ್‌ಐವಿ ಕಾಯಿಲೆಯನ್ನೂ ಗುಣಪಡಿಸಬಹುದು ಎಂದು ಇದೇ ಮೊದಲ ಬಾರಿ ತೋರಿಸಿಕೊಟ್ಟಿರುವುದರಿಂದ ಇದೊಂದು ಅತ್ಯಂತ ಮುಖ್ಯ ಮೈಲಿಗಲ್ಲಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಅಧ್ಯಯನದ ಸಹಲೇಖಕ ಡಾ. ಕಮಲ್ ಖಲಿಲಿ ತಿಳಿಸಿದ್ದಾರೆ. ಆದರೆ ಇನ್ನೋರ್ವ ಸಹಲೇಖಕ ಡಾ. ಹೊವರ್ಡ್ ಗೆಂಡೆಲ್‌ಮ್ಯಾನ್ ಹೇಳುವಂತೆ, ಈ ಚಿಕಿತ್ಸೆಯು ಮಾನವರಿಗೂ ಇದೇ ರೀತಿ ಅನ್ವಯಿಸುತ್ತದೆ ಎಂದು ಹೇಳಲಾಗದು. ಇಲಿಯ ಮೇಲೆ ಪ್ರಯೋಗಿಸುವ ಯಾವುದೇ ಪ್ರಯೋಗವು ಅದರ ಜಾತಿ, ಔಷಧಿಯನ್ನು ಯಾವ ರೀತಿ ನೀಡಲಾಗುತ್ತದೆ, ಅದರ ಹಂಚಿಕೆ, ಎಲ್ಲದರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಪುರುಷ ಅಥವಾ ಮಹಿಳೆಯರಿಗೆ ಅನ್ವಯಿಸುವುದಕ್ಕಿಂತ ಸುಲಭವಾಗಿರುತ್ತದೆ. ಮಾನವನ ಮೇಲೆ ಈ ಚಿಕಿತ್ಸೆಯನ್ನು ಪ್ರಯೋಗಿಸುವುದಕ್ಕೂ ಮೊದಲ ಇನ್ನಷ್ಟು ಪ್ರಯೋಗಗಳು ನಡೆಯಬೇಕಿದೆ ಎಂದು ಇಬ್ಬರು ಸಂಶೋಧಕರೂ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News