×
Ad

ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿ ಆದಿತ್ಯ ಪಾಂಚೋಲಿಯಿಂದ ಅತ್ಯಾಚಾರ: ನಟಿ ಆರೋಪ

Update: 2019-07-03 21:37 IST

ಮುಂಬೈ, ಜು. 3: ಬಾಲಿವುಡ್ ನಟ ಆದಿತ್ಯ ಪಂಚೋಲಿ ತನಗೆ ಮತ್ತು ಬರಿಸುವ ಔಷಧ ಬೆರೆಸಿದ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದರು ಎಂದು ಬಾಲಿವುಡ್‌ನ ನಟಿಯೊಬ್ಬರು ಆರೋಪಿಸಿದ್ದಾರೆ.

 ಪೊಲೀಸರಿಗೆ ನೀಡಿದ ದೂರಿನಲ್ಲಿ ನಟಿ, ಪಾಂಚೋಲಿ ಬ್ಲ್ಯಾಕ್‌ ಮೇಲ್ ಮಾಡುವುದಕ್ಕೆ ಅತ್ಯಾಚಾರದ ಫೋಟೊ ಕೂಡ ತೆಗೆದಿದ್ದಾರೆ. 2004-2006ರಲ್ಲಿ ತಾನು ಹಿರಿಯ ಐಪಿಎಸ್ ಅಧಿಕಾರಿಯೋರ್ವರಲ್ಲಿ ದೂರು ನೀಡಿದ್ದೆ. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದಿದ್ದಾರೆ.

   ವರ್ಸೋವಾ ಪೊಲೀಸ್ ಠಾಣೆಗೆ ಸಲ್ಲಿಸಿದ ಎರಡೂವರೆ ಪುಟಗಳ ಹೇಳಿಕೆಯಲ್ಲಿ ನಟಿ, ಬಾಲಿವುಡ್‌ನ ತನ್ನ ಪ್ರಯಾಣ ಹಾಗೂ ಬಾಲಿವುಡ್‌ನಲ್ಲಿ ಆಗ ಪ್ರಸಿದ್ಧರಾಗಿದ್ದ ಆದಿತ್ಯ ಪಾಂಚೋಲಿ ಅವರನ್ನು ಭೇಟಿಯಾಗಿರುವುದರ ಬಗ್ಗೆ ಅವರು ಬರೆದಿದ್ದಾರೆ.

 ‘‘ನಾನು ಆ ವರ್ಷ ಆದಿತ್ಯ ಪಾಂಚೋಲಿ ಅವರನ್ನು ಭೇಟಿಯಾಗಿದ್ದೆ. ಆಗ ಅವರಿಗೆ 38 ವರ್ಷ. ಅವರು ನನಗಿಂತ 22 ವರ್ಷ ಹಿರಿಯರಾಗಿದ್ದರು. ನಾನು ಹುಡುಗಿಯರ ಗುಂಪಿನೊಂದಿಗೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದೆ. ಅವರು ವಿವಾಹವಾಗಿದ್ದರು ಹಾಗೂ ಇಬ್ಬರು ಮಕ್ಕಳಿದ್ದರು. ಆಗ ಅವರ ಮಗಳ ವಯಸ್ಸು ನನ್ನ ವಯಸ್ಸು ಒಂದೇ ಆಗಿರಬಹುದು’’ ಎಂದು ಅವರು ಹೇಳಿದ್ದಾರೆ.

  ‘‘2004ರಲ್ಲಿ ನಾನು ಅವರೊಂದಿಗೆ ಪಾರ್ಟಿಗೆ ಹೋಗಿದ್ದೆ. ಪಾನಿಯ ಕುಡಿದ ಬಳಿಕ ನನಗೆ ಅಮಲಾಯಿತು. ಬಹುಶಃ ಪಾಂಚೋಲಿ ಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರೆಸಿರಬೇಕು. ಪಾರ್ಟಿ ಮುಗಿದ ಬಳಿಕ ಪಂಚೋಲಿ ನನನ್ನು ಹಾಸ್ಟೆಲ್‌ಗೆ ಬಿಡುತ್ತೇನೆ ಎಂದು ಹೇಳಿದರು. ನಾನು ಅವರ ಕಾರಿನಲ್ಲಿ ಹೋದೆ. ಅವರು ಯಾರಿ ರೋಡ್‌ನಲ್ಲಿ ಕಾರು ನಿಲ್ಲಿಸಿದರು ಹಾಗೂ ನನ್ನ ಮೇಲೆ ಅತ್ಯಾಚಾರ ಎಸಗಿದರು. ಈ ಸಂದರ್ಭ ನನಗೆ ಗೊತ್ತಿಲ್ಲದಂತೆ ಅವರು ಫೋಟೊ ಕೂಡ ತೆಗೆದಿದ್ದರು. ನಾವು ಮುಂದೆ ಪತಿ ಪತ್ನಿಯರಂತೆ ಸಂಬಂಧ ಇರಿಸಿಕೊಳ್ಳೋಣ ಎಂದರು. ನಾನು ಸಾಧ್ಯವಿಲ್ಲ ಎಂದಾಗ, ಫೋಟೊ ತೋರಿಸಿ ಬೆದರಿಕೆ ಒಡ್ಡಿದ್ದರು’’ ಎಂದು ನಟಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News