ರಾಹುಲ್ ನಂತರ ಕಾಂಗ್ರೆಸ್ ಅಧ್ಯಕ್ಷ ಯಾರು?: ಮುಂಚೂಣಿಯಲ್ಲಿದೆ ಈ ಇಬ್ಬರು ನಾಯಕರ ಹೆಸರು…

Update: 2019-07-03 17:04 GMT

ಹೊಸದಿಲ್ಲಿ, ಜು.3: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಹುಲ್ ಗಾಂಧಿಯವರು ರಾಜೀನಾಮೆ ನೀಡಿದ್ದು, ವಾರದೊಳಗೆ ಹೊಸ ಅಧ್ಯಕ್ಷರನ್ನು ಘೋಷಿಸಲಾಗುವುದು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಕಾಂಗ್ರೆಸ್ ನ ನೂತನ ಅಧ್ಯಕ್ಷರ ಸ್ಥಾನಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆಯಾದರೂ, ಸುಶೀಲ್ ಕುಮಾರ್ ಶಿಂಧೆ ಮತ್ತು ಮಲ್ಲಿಕಾರ್ಜುನ ಖರ್ಗೆ ಹೆಸರುಗಳು ಮುಂಚೂಣಿಯಲ್ಲಿದ್ದು, ಇವರಿಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳಲಿದೆ ಎನ್ನುವುದು ಬಹುತೇಕ ಖಚಿತಗೊಂಡಿದೆ.

ಪಿವಿ ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ ನಂತರ ನೆಹರೂ-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿ ಇದೇ ಮೂರನೆ ಬಾರಿ ಅಧ್ಯಕ್ಷರಾಗಲಿದ್ದಾರೆ.

77 ವರ್ಷದ ಸುಶೀಲ್ ಕುಮಾರ್ ಶಿಂಧೆ ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಮಾಜಿ ಕೇಂದ್ರ ಸಚಿವರು. ಮಹಾರಾಷ್ಟ್ರದ ಹಿರಿಯ ನಾಯಕರು ಮಾತ್ರವಲ್ಲದೆ, ಶಿಂಧೆ ಪಕ್ಷದೊಳಗಿನ ಪ್ರಮುಖ ದಲಿತ ನಾಯಕರೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News