ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಚವ್ಹಾಣ್ ರಾಜೀನಾಮೆ

Update: 2019-07-03 17:40 GMT

ಹೊಸದಿಲ್ಲಿ, ಜು. 3: ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕಕ್ಕೆ ಅಶೋಕ್ ಚವ್ಹಾಣ್ ಸಲ್ಲಿಸಿದ ರಾಜೀನಾಮೆಯನ್ನು ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಸ್ವೀಕರಿಸಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಹೊಸದಿಲ್ಲಿಯಲ್ಲಿ ಜೂನ್ 29ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಕೂಡಲೇ ನಾನು ರಾಹುಲ್ ಗಾಂಧಿ ಅವರನ್ನು ವೈಯುಕ್ತಿಕವಾಗಿ ಭೇಟಿಯಾಗಿ ರಾಜೀನಾಮೆ ನೀಡಿದೆ. ಆದರೆ, ಆಗ ಅವರು ಯಾವುದೇ ನಿರ್ಣಯ ತೆಗೆದುಕೊಂಡಿರಲಿಲ್ಲ ಎಂದು ಅಶೋಕ್ ಚವ್ಹಾಣ್ ಹೇಳಿದ್ದಾರೆ.

ತಾನು ಕಳೆದ ವಾರ ಮತ್ತೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ‘‘ನಾನು ರಾಜ್ಯ ಕಾಂಗ್ರೆಸ್ ಅನ್ನು ಮುನ್ನಡೆಸಲು ಸೂಕ್ತನಲ್ಲ. ಆದುದರಿಂದ ನನ್ನನ್ನು ಹುದ್ದೆಯಿಂದ ಕೈಬಿಡಬೇಕು’’ ಎಂದು ವಿನಂತಿಸಿದ್ದೆ. ತನ್ನ ರಾಜೀನಾಮೆ ಸ್ವೀಕರಿಸಲಾಗಿದೆ. ತನ್ನ್ನ ಉತ್ತರಾಧಿಕಾರಿ ಇನ್ನು ಒಂದೆರೆಡು ದಿನಗಳಲ್ಲಿ ನಿಯೋಜನೆಯಾಗಲಿದ್ದಾರೆ ಎಂದು ಚವ್ಹಾಣ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News