×
Ad

ವಿಶ್ವಕಪ್‌ನಲ್ಲಿ ಧೋನಿ ವಿದಾಯ ಸಾಧ್ಯತೆ

Update: 2019-07-03 23:45 IST

ಬರ್ಮಿಂಗ್‌ಹ್ಯಾಮ್, ಜು.3: ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತ ಆಡುವ ಕೊನೆಯ ಪಂದ್ಯವೇ ಮಹೇಂದ್ರ ಸಿಂಗ್ ಧೋನಿಯವರ ವಿದಾಯದ ಪಂದ್ಯ ಆಗುವ ಸಾಧ್ಯತೆಯಿದೆ.

ಒಂದೊಮ್ಮೆ ಭಾರತ ಜು.14 ರಂದು ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ಗೆ ಪ್ರವೇಶಿಸಿ ಪ್ರಶಸ್ತಿ ಜಯಿಸಿದರೆ, ಭಾರತೀಯ ಕ್ರಿಕೆಟ್‌ನ ಓರ್ವ ದಂತಕತೆಯಾಗಿರುವ ಧೋನಿ ಪರಿಪೂರ್ಣ ವಿದಾಯ ಹೇಳಿದಂತಾಗುತ್ತದೆ. ‘‘ಧೋನಿ ವಿಶ್ವಕಪ್ ಬಳಿಕ ಭಾರತದ ಪರ ಆಡುವುದನ್ನು ಮುಂದುವರಿಸುವ ಸಾಧ್ಯತೆಯಿಲ್ಲ. ದಿಢೀರನೆ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸುವ ನಿರ್ಧಾರ ತಳೆದಿದ್ದ ಧೋನಿಯವರ ಭವಿಷ್ಯದ ಕುರಿತು ಈಗ ಹೇಳುವುದು ತುಂಬಾ ಕಷ್ಟಕರ’’ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೀಗ ಭಾರತ ವಿಶ್ವಕಪ್‌ನ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದು, ಟೀಮ್ ಮ್ಯಾನೇಜ್‌ಮೆಂಟ್ ಅಥವಾ ಬಿಸಿಸಿಐ ಸೂಕ್ಷ್ಮ ವಿಚಾರದ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಧೋನಿ 7 ಪಂದ್ಯಗಳಲ್ಲಿ 93 ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 223 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News