ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿಯಲ್ಲಿ ವನಮಹೋತ್ಸಮ ಆಚರಣೆ

Update: 2019-07-04 06:03 GMT

ಮಂಗಳೂರು, ಜು.4: ನಗರದ ಅತ್ತಾವರದಲ್ಲಿರುವ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿಯಲ್ಲಿ ಇತ್ತೀಚೆಗೆ ವನಮಹೋತ್ಸವ ಆಚರಿಸಲಾಯಿತು.

ಹಸಿರು ಉಡುಗೆತೊಡುಗೆಗಳನ್ನು ಧರಿಸಿ ಪರಿಸರದಲ್ಲಿ ಗಿಡಮರಗಳ ಮಹತ್ವವನ್ನು ಸಾರಿದ ಪುಟಾಣಿ ಮಕ್ಕಳು ವನಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಮಾಹಿತಿಯನ್ನೊಳಗೊಂಡ ಕಿರುಚಿತ್ರವೊಂದರನ್ನು ಎಲ್.ಸಿ.ಡಿ. ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಆ ಮೂಲಕ ಅರಣ್ಯನಾಶದಿಂದ ಆಗುವ ದುಷ್ಪರಿಣಾಮಗಳು ಕುರಿತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ವಿವರಿಸಲಾಯಿತು. ಇದೇ ಸಂದರ್ಭ ಹೆಚ್ಚು ಗಿಡಮರಗಳನ್ನು ಬೆಳೆಸುವ ಹಾಗೂ ಮಾಲಿನ್ಯದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡುವ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪ್ರತಿಜ್ಞೆ ಮಾಡಿದರು.

ಬಳಿಕ ವಿದ್ಯಾರ್ಥಿಗಳು ತಾವು ಮನೆಗಳಿಂದ ತಂದಿದ್ದ ದೊಡ್ಡ ಕುಂಡಗಳನ್ನು ಶಾಲಾ ಆವರಣದಲ್ಲಿ ಇಟ್ಟು ಅವುಗಳಲ್ಲಿ ಕೆಲವು ಗಿಡಗಳ ಬೀಜಗಳನ್ನು ಬಿತ್ತಿ ವನಮಹೋತ್ಸವ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News