ಪುಂಜಾಲಕಟ್ಟೆ: ಸಾರ್ವಜನಿಕ ಕುಡಿಯುವ ನೀರಿನ ಘಟಕ ಕೊಡುಗೆ

Update: 2019-07-04 06:52 GMT

ಬಂಟ್ವಾಳ, ಜು.4: ಪುಂಜಾಲಕಟ್ಟೆಯ ಅಬ್ದುರ್ರಹ್ಮಾನ್ ಅವರು ತನ್ನ ನೂತನ ಮನೆ ‘ತಾಜ್ ಮಸ್ಕನ್’ ಇದರ ಗೃಹಪ್ರವೇಶದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿಕೊಟ್ಟಿರುವ ಕುಡಿಯುವ ನೀರಿನ ಘಟಕವನ್ನು ಜೂ.30ರಂದು ಲೋಕಾರ್ಪಣೆಗೊಂಡಿತು.

ಅಬ್ದುರ್ರಹ್ಮಾನ್ ಅವರ ಮನೆ ಸಮೀಪ ನಿರ್ಮಿಸಲಾಗಿರುವ ಈ ಸಾರ್ವಜನಿಕ ಕುಡಿಯುವ ನೀರಿನ ಘಟಕವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು.

ಈ ಸಂದರ್ಭ ಜಿಪಂ ಸದಸ್ಯರ ತುಂಗಪ್ಪ ಬಂಗೇರ ಸಹಿತ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News