ಶೀಘ್ರದಲ್ಲೇ ಬರಲಿದೆ 20 ರೂ. ವರೆಗಿನ ನಾಣ್ಯಗಳ ನೂತನ ಸರಣಿ
ಹೊಸದಿಲ್ಲಿ, ಜು.5: ಒಂದು ರೂ., 2, 5, 10 ಮತ್ತು 20 ರೂ.ನ ನಾಣ್ಯಗಳ ನೂತನ ಸರಣಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಸಿಗುವಂತೆ ಮಾಡಲಾಗುವುದು ಎಂದು ಸರಕಾರ ಶುಕ್ರವಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ, ದೃಷ್ಟಿಹೀನರೂ ಸುಲಭವಾಗಿ ಗುರುತಿಸಬಲ್ಲಂತಹ ಒಂದು ರೂ. 2,5,10 ಮತ್ತು 20 ರೂ.ನ ನಾಣ್ಯಗಳ ನೂತನ ಸರಣಿಯನ್ನು ಮಾರ್ಚ್ 7ರಂದು ಅನಾವರಣಗೊಳಿಸಿದ್ದರು. ಸಂಸತ್‌ನಲ್ಲಿ ಶುಕ್ರವಾರ ಕೇಂದ್ರ ಸರಕಾರ 2019-20ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಮಾಹಿತಿ ನೀಡಿದರು.
ಕ್ರೀಡಾಪಟುಗಳಿಗೆ ಎಲ್ಲ ಅಗತ್ಯ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶದಿಂದ ಮತ್ತು ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಮೂಲದಿಂದಲೇ ಪುನರುತ್ಥಾನಗೊಳಿಸುವ ಸಲುವಾಗಿ ಖೇಲೊ ಇಂಡಿಯಾ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಕ್ರೀಡಾಳುಗಳನ್ನು ಬೆಳೆಸಲು ಖೇಲೊ ಇಂಡಿಯಾ ಯೋಜನೆಯಡಿ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿಯನ್ನು ರಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.