ಆದಾಯ ತೆರಿಗೆ ಪಾವತಿಗೆ ಪಾನ್‌ಕಾರ್ಡ್ ಬದಲಿಗೆ ಆಧಾರ್ ಕಾರ್ಡ್

Update: 2019-07-05 15:08 GMT

ಹೊಸದಿಲ್ಲಿ, ಜು.5: ಇನ್ನು ಮುಂದೆ ಆದಾಯ ತೆರಿಗೆ ಪಾವತಿಗೆ ಪಾನ್‌ಕಾರ್ಡ್ ಕಡ್ಡಾಯವಲ್ಲ. ಪಾನ್‌ಕಾರ್ಡ್ ಹೊಂದಿಲ್ಲದವರು ಆಧಾರ್ ಸಂಖ್ಯೆಯನ್ನು ನಮೂದಿಸಿ ತೆರಿಗೆ ಪಾವತಿಸಬಹುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

 ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡನ್ನು ಪರಸ್ಪರ ಪರ್ಯಾಯವಾಗಿ ಬಳಸುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. 120 ಕೋಟಿಗೂ ಅಧಿಕ ಭಾರತೀಯರು ಈಗ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದ್ದರಿಂದ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಪಾನ್ ಕಾರ್ಡ್ ಹೊಂದಿಲ್ಲದವರು ಆಧಾರ್‌ಕಾರ್ಡ್ ಬಳಸುವ ಬಗ್ಗೆ ಪ್ರಸ್ರಾವಿಸಲಾಗಿದೆ.

 ಅಲ್ಲದೆ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರು(ಎನ್‌ಆರ್‌ಐ) ದೇಶಕ್ಕೆ ಆಗಮಿಸಿದಾಗ ಅವರಿಗೆ ಆಧಾರ್ ಕಾರ್ಡ್ ನೀಡುವ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಈಗ ಇರುವ ನಿಯಮದಂತೆ, ಎನ್‌ಆರ್‌ಐಗಳು ಆಧಾರ್ ಕಾರ್ಡ್ ಪಡೆಯಲು 180 ದಿನ ಕಾಯಬೇಕು. ಇನ್ನು ಮುಂದೆ 180 ದಿನ ಕಾಯಬೇಕಿಲ್ಲ, ಭಾರತಕ್ಕೆ ಆಗಮಿಸಿದೊಡನೆ ಎನ್‌ಆರ್‌ಐಗಳು ಆಧಾರ್ ಪಡೆಯುವ ಸಲಹೆಯನ್ನು ಮುಂದಿರಿಸಿದ್ದೇನೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News