ಪರಿಯಾಲ್ತಡ್ಕ ಬ್ಲಿಝ್ ಲಂಡನ್ ಪ್ರಿ ಸ್ಕೂಲ್ ನಲ್ಲಿ ಪರಿಸರ ದಿನಾಚರಣೆ

Update: 2019-07-06 04:56 GMT

ವಿಟ್ಲ: ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಆಗಿರಬೇಕು, ಇಂದು ಮರಗಳು ಕಡಿಮೆಯಾಗಿ ನೀರು, ಆಹಾರಕ್ಕೆ ಬರಗಾಲ ಬಂದಂತಾಗಿದೆ ಎಂದು ಬ್ಲಿಝ್ ಲಂಡನ್ ಪ್ರಿ ಸ್ಕೂಲ್ ನ ಡೈರೆಕ್ಟರ್ ಉಮರುಲ್ ಫಾರೂಕ್ ರಝಾ ಅಮ್ಜದಿ ನುಡಿದರು.

ಅವರು ಪರಿಸರ ದಿನಾಚರಣೆಯ ಅಂಗವಾಗಿ ಪರಿಯಾಲ್ತಡ್ಕ ಬ್ಲಿಝ್ ಲಂಡನ್ ಪ್ರಿ ಸ್ಕೂಲ್ ನಲ್ಲಿ ಪ್ರತಿ ಮಕ್ಕಳಿಗೆ ಒಂದೊಂದು ಸಸಿ ವಿತರಣೆ ನಡೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಶಾಲೆಯ ಮಕ್ಕಳು ಪ್ರತಿದಿನ ಬೆಳಗ್ಗೆ ಶಾಲೆಗೆ ಬರುವಾಗ ತಮ್ಮ ಸಸಿಗೆ ನೀರುಣಿಸಿ ಬರಬೇಕು. ಈ ರೀತಿ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ಪರಿಸರದೊಂದಿಗೆ ಸ್ನೇಹ ಬೆಳೆಸುವ ಕಾರ್ಯ ನಮ್ಮ ಸಂಸ್ಥೆ  ಮಾಡುತ್ತಿದೆ ಎಂದರು.

ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಅನ್ಸಾರ್ ರಝಾ ಪೋಷಕರಿಗೆ ಪರಿಸರ ಸಂರಕ್ಷಣೆ ಹಾಗೂ ಮಕ್ಕಳ ಪೋಷಣೆಯ ಬಗ್ಗೆ ತರಬೇತಿ ನಡೆಸಿ "ಬ್ಲಿಝ್ ಲಂಡನ್ ಸಂಸ್ಥೆಯು ಒಬ್ಬರಿಗೆ ಒಂದು ಸಸಿ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿ ಶಾಖೆಯಲ್ಲೂ ಪರಿಸರ ಸಂರಕ್ಷಣೆ ಕಾರ್ಯಕ್ರಮ ನಡೆಸುತ್ತಿದೆ.  ಪರಿಸರ ಸಂರಕ್ಷಣೆಯ ಬಗ್ಗೆ ಪುಟಗಟ್ಟಲೆ ಪ್ರಬಂಧ ಬರೆಯುವುದಕ್ಕಿಂತ ಇಂತಹ ಪ್ರಾಯೋಗಿಕತೆಯು ಹೆಚ್ಚು ಫಲಪ್ರದ" ಎಂದರು.

ಕಾರ್ಯಕ್ರಮದಲ್ಲಿ ಕಮರುದ್ದೀನ್ ಪರಿಯಾಲ್ತಡ್ಕ,  ಹನೀಫ್ ಸಿಟಿ ಮೊಬೈಲ್‌ ಗರಡಿ, ಲತೀಫ್ ಪುಣಚ, ಮನ್ಸೂರ್ ಕುಟ್ಟಿತಡ್ಕ, ಹಂಝ ನಾಟೆಕಲ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಅಶ್ರಫ್ ರಝಾ ಅಮ್ಜದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News