ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ವತಿಯಿಂದ "ಗ್ರೀನ್ ಡೇ" ಪರಿಸರ ಜಾಗೃತಿ ಕಾರ್ಯಕ್ರಮ

Update: 2019-07-06 06:10 GMT

ಬಜಾಲ್ : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಇದರ ವತಿಯಿಂದ ಗ್ರೀನ್ ಡೇ ಪರಿಸರ ದಿನವನ್ನು ಆಚರಿಸಲಾಯಿತು.

ಫಾರೆಸ್ಟ್ ಡೆಪ್ಯುಟಿ ರೆಂಜೆರ್ ವೆಂಕಟೇಶ್ ಮತ್ತು ಫಾರೆಸ್ಟ್ ಗಾರ್ಡ್ ರಾಮಲಿಂಗ, ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಕೋಶಾಧಿಕಾರಿ ಕೆ ಪಿ ನೂರುಲ್ ಅಮೀನ್  ಮುಖ್ಯ ಅಥಿತಿಗಳಾಗಿ  ಭಾಗವಹಿಸಿದ್ದರು.

ಶಾಲಾ ಸಂಚಾಲಕ ಯೂಸಫ್ ಪಕ್ಕಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ನುಷ್ರತ್ ಖುರೇಶ್ ಪ್ರಾಸ್ತಾವಿಕವಾಗಿ ನುಡಿದರು. ಫಾರೆಸ್ಟ್ ಡೆಪ್ಯುಟಿ ರೆಂಜೆರ್ ವೆಂಕಟೇಶ್ ಮಾತನಾಡುತ್ತಾ ಹಸಿರಿದ್ದರೆ ಉಸಿರು, ಮರ ನೆಡುವುದರಿಂದಲೇ ವಿಶ್ವಕ್ಕೆ ಭವಿಷ್ಯ ಇರುವುದು. ನಾವು ನಮ್ಮ ಜನ್ಮ ಭೂಮಿಯನ್ನು ಇಲ್ಲಿನ ಪ್ರಕೃತಿಯನ್ನು ಕಾಪಾಡಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರದ ಸಂರಕ್ಷಣೆಯ ತೀರ್ಮಾನ ಮಾಡಬೇಕು ಎಂದರು.

ನಂತರ ಮಾತನಾಡಿದ ಫಾರೆಸ್ಟ್ ಗಾರ್ಡ್ ರಾಮಲಿಂಗ ಅವರು ಪರಿಸರದ ಮಹತ್ವದ ಬಗ್ಗೆ ಹಾಡುಗಳ ಮತ್ತು ವಚನಗಳ ಮೂಲಕ ಮಕ್ಕಳನ್ನು ರಂಜಿಸಿ ವಿವರಿಸಿದರು.

ಕೆ ಪಿ ನೂರುಲ್ ಅಮೀನ್ ತಮ್ಮ  ಅನಿಸಿಕೆಗಳನ್ನು ವ್ಯಕ್ತಪಡಿಸಿದರು ನಂತರ ವಿದ್ಯಾರ್ಥಿಗಳು, ಅಧ್ಯಾಪಕರು, ಟ್ರಸ್ಟ್ ಸದಸ್ಯರು, ಫಾರೆಸ್ಟ್ ಸಿಬ್ಬಂದಿಗಳು ಮತ್ತು ಅತಿಥಿಗಳು, ಸೇರಿ ಶಾಲಾ ವಠಾರ ಹಾಗು ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲಾಯಿತು. ಶಾಲಾ ಮಕ್ಕಳ ವಿವಿಧ ಗ್ರೂಪ್ ಗಳಿಂದ ಪರಿಸರದ ಜಾಗ್ರತಿ ಮೂಡಿಸುವ ಸಣ್ಣ ನಾಟಕ ಪ್ರದರ್ಶನವನ್ನು ವಿದ್ಯಾರ್ಥಿಗಳಿಗಾಗಿ ಪ್ರದರ್ಶಿದಲಾಯಿತು. ವಿಧ್ಯಾರ್ಥಿನಿ ಫಾಹಿಮ್ ಫಾತಿಮಾ ಸ್ವಾಗತಿಸಿದರು, ರೈಹಾನ ಪರಿಸರದ ಮಹತ್ವದ ಬಗ್ಗೆ ಭಾಷಣ ಮಾಡಿ, ಎಸ್ ಪಿ ಎಲ್  ಹನ್ನತ್  ಕಾರ್ಯಕ್ರಮ ನಿರೂಪಿಸಿದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News