ಬಂಟ್ವಾಳ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2019-07-06 13:28 GMT

ಬಂಟ್ವಾಳ, ಜು. 6: ಗ್ರಾಪಂ, ಆಲ್‌ಕಾರ್ಗೋ ಲಾಜಿಸ್ಟಿಕ್, ಪ್ರಜ್ಞಾ ಸಲಹಾ ಕೇಂದ್ರ, ಜನ ಶಿಕ್ಷಣ ಟ್ರಸ್ಟ್, ಸುಗ್ರಾಮ ಜಾಗೃತಿ ವೇದಿಕೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋಲ್ಸ್, ಕೆಎಂಸಿ ಆಸ್ಪತ್ರೆ, ಸಮುದಾಯ ದಂತ ಆರೋಗ್ಯ ವಿಭಾಗ ಅತ್ತಾವರ ಇವುಗಳ ಸಹಭಾಗಿತ್ವದಲ್ಲಿ ತಾಲೂಕಿನ ಅರಳ, ನರಿಂಗಾನ, ಇರಾ, ಕೊಳ್ನಾಡು ಗ್ರಾಪಂನಲ್ಲಿ ಉಚಿತ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳು ಬೆಳಗ್ಗೆ 9:30ರಿಂದ ನಡೆಯಲಿದೆ.

 ಜು.9ರಂದು ಅರಳದ ಅಣ್ಣಳಿಕೆಯ ಶ್ರೀ ವಿಘ್ನೇಶ್ವರ ಸಭಾಭವನ, ಜು.17ರಂದು ನರಿಂಗಾನ ಗ್ರಾಪಂ ಕಚೇರಿ ವಠಾರ,ಜು. 23ರಂದು ಇರಾ ಕಲ್ಲಾಡಿ ಮಲಿಯಾಳಿ ಬಿಲ್ಲವ ಭವನ, ಜು.30ರಂದು ಕೊಳ್ನಾಡಿನ ಸೌಹಾರ್ದ ಭವನದಲ್ಲಿ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಮಧುಮೇಹ ತಪಾಸಣೆ, ಕಣ್ಣು, ಕಿವಿ, ಮೂಗು, ಗಂಟಲು,ಎಲುಬು, ಮಕ್ಕಳು ಮತ್ತು ಸ್ತ್ರೀ ರೋಗ ತಜ್ಞರು ಭಾಗವಹಿಸಲಿದ್ದಾರೆ. ಉಚಿತವಾಗಿ ಔಷಧ ಹಾಗೂ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ನೀಡಲಾಗುವುದು. ಕಣ್ಣಿನ ಪೊರೆ ಚಿಕಿತ್ಸೆಯನ್ನು ಕೆಎಂಸಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು.

ಶಿಬಿರದಲ್ಲಿ ಭಾಗವಹಿಸಿ ಹಸಿರು ಕಾರ್ಡ್ ಪಡೆದವರಿಗೆ ಶಸ್ತ್ರಚಿಕಿತ್ಸೆಗೆ ಗರಿಷ್ಟ 10 ಸಾವಿರ ರೂ.ಮತ್ತು ಇತರ ಚಿಕಿತ್ಸೆಗೆ ಗರಿಷ್ಟ 5 ಸಾವಿರ ರೂ. ತನಕ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News