ಉಡುಪಿ ಸೀರೆಯ ಮೌಲ್ಯವರ್ಧನೆಗೆ ಪ್ರಯತ್ನಿಸಿ:ಎಸ್.ಆರ್.ಸತೀಶ್

Update: 2019-07-06 15:25 GMT

ಕಿನ್ನಿಗೋಳಿ, ಜು.6: ವೈವಿಧ್ಯಮಯ ಕಸೂತಿ ಇತ್ಯಾದಿಗಳಿಂದ ಉಡುಪಿ ಸೀರೆಗಳ ವೌಲ್ಯವರ್ಧನೆ ಮಾಡಿ ಹೆಚ್ಚಿನ ದರಗಳಿಗೆ ಪ್ರಯತ್ನಿಸಬೇಕು ಎಂದು ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ)ದ ಆಡಳಿತ ನಿರ್ದೇಶಕ ಎಸ್.ಆರ್.ಸತೀಶ್ ಹೇಳಿದ್ದಾರೆ.

ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಕೌನ್ಸಿಲ್ಗಳ ಜಂಟಿ ಆಶ್ರಯದಲ್ಲಿ ತಾಳಿಪಾಡಿ ನೇಕಾರಿಕಾ ಪ್ರಾಥಮಿಕ ಸಹಕಾರಿ ಸಂಘ ಕಿನ್ನಿಗೋಳಿ ಇದರ ‘ನೇಕಾರ ಸೌಧ’ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಾಗತಿಕ ಮಾನ್ಯತೆ(ಜಿಐ)ನಡಿ ನೋಂದಣಿಯಾದ ಉಡುಪಿ ಸೀರೆ ಉತ್ಪನ’್ನ ಕುರಿತ ಜಾಗೃತಿ ಸಭೆಯ ಅಧ್ಯಕ್ಷತೆ ಹಿಸಿ ಅವರು ಮಾತನಾಡುತಿದ್ದರು.

ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಕೌನ್ಸಿಲ್ಗಳ ಜಂಟಿ ಆಶ್ರಯದಲ್ಲಿ ತಾಳಿಪಾಡಿ ನೇಕಾರಿಕಾ ಪ್ರಾಥಮಿಕ ಸಹಕಾರಿ ಸಂಘ ಕಿನ್ನಿಗೋಳಿ ಇದರ ‘ನೇಕಾರ ಸೌ’ಸಾಂಗಣದಲ್ಲಿ ಶುಕ್ರವಾರ ನಡೆದ ‘ಜಾಗತಿಕ ಮಾನ್ಯತೆ(ಜಿಐ)ನಡಿ ನೋಂದಣಿಯಾದ ಉಡುಪಿ ಸೀರೆ ಉತ್ಪನ’್ನ ಕುರಿತ ಜಾಗೃತಿ ಸೆಯಅ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಾಗತಿಕ ಮಾರುಕಟ್ಟೆಗೆ ಉಡುಪಿ ಸೀರೆಯನ್ನು ತೆರೆದಿಡಲು ಜಾಗತಿಕ ಮಾನ್ಯತೆ (ಜಿಐ) ಟ್ಯಾಗ್ ಸಹಾಯ ಮಾಡುತ್ತದೆ. ಆದರೆ ಇದಕ್ಕಾಗಿ ಉಡುಪಿ ಸೀರೆಯ ಮೌಲ್ಯವರ್ಧನೆ ಮಾಡಬೇಕಾಗುತ್ತದೆ.ಕಠಿಣ ಪರಿಶ್ರಮಗಳಾದ ನೇಕಾರರಿಗೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಈಗ ಸಿಗುತ್ತಿಲ್ಲ. ಅವರ ಶ್ರಮ ಉಳಿದ ಜನರಿಗೆ ತಿಳಿಯುತ್ತಿಲ್ಲ ಎಂದರು.

ನೇಕಾರರ ಆತ್ಮಸ್ಥೈರ್ಯ ಹೆಚ್ಚಿಸಿ ಅವರ ಸೀರೆಗಳಿಗೆ ಹೊರಗಿನ ಮಾರುಕಟ್ಟೆ ದೊರಕಿಸಿಕೊಟ್ಟು ಹೆಚ್ಚಿನ ದರ ಸಿಗುವಂತೆ ಮಾಡಿ ಉಡುಪಿ ಸೀರೆಯ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕಾರ್ಕಳದ ಕದಿಕೆ ಟ್ರಸ್ಟಿನ ಕಾರ್ಯವನ್ನು ಅವರು ಶ್ಲಾಘಿಸಿದರು. ನೇಕಾರಿಕೆಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಜಿಐ ಟ್ಯಾಗ್‌ನ ಮಹತ್ವದ ಬಗ್ಗೆ ಅವರು ಸೇರಿದ ನೇಕಾರರಿಗೆ ವಿವರಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ನೇಕಾರರ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಾಹಕರು, ಸದಸ್ಯರು ಹಾಗೂ ನೇಕಾರರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕದಿಕೆ ಟ್ರಸ್ಟಿನ ಅಧ್ಯಕ್ಷೆ ಮಮತಾ ರೈ ಮಾತನಾಡಿ, ಉಡುಪಿ ಸೀರೆಯ ಪುನಶ್ಚೇತನಕ್ಕೆ ಟ್ರಸ್ಟ್ ನಡೆಸಿರುವ ಅಭಿಯಾನದ ನಂತರದ ಬೆಳವಣಿಗೆಗಳ ಕುರಿತು ಹಾಗೂ ನೇಕಾರರಲ್ಲಿ ಅರಿವು ಮೂಡಿಸುವ ಬಗ್ಗೆ ಇಲಾಖೆಯಿಂದ ಆಗಬೇಕಾದ ಕೆಲಸಗಳ ಕುರಿತಂತೆ ಸಲಹೆಗಳನ್ನು ನೀಡಿದರು.

ವಿಟಿಪಿಸಿಯ ಪ್ರಭಾವತಿ ರಾವ್,ದ.ಕ.ಮತ್ತು ಉಡುಪಿ ಜಿಲ್ಲೆಗಳ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಶಂಕರ್ ಮತ್ತು ಧರಣೇಶ್, ನಿಟ್ಟೆ ಫ್ಯಾಷನ್ ಡಿಸೈನಿಂಗ್ ಸಂಸ್ಥೆಯ ಧನಲಕ್ಷ್ಮೀ, ಕದಿಕೆ ಟ್ರಸ್ಟಿನ ಕೋಶಾಧಿಕಾರಿ ಶ್ರೀಕುಮಾರ್,ನೇಕಾರ ಸಮುದಾಯದ ಮುಖಂಡ ವಿಶ್ವನಾಥ ಶೆಟ್ಟಿಗಾರ್ ಸಂವಾದದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News