ಉಡುಪಿ: ಚಿನ್ನಾಭರಣಕ್ಕಾಗಿ ಒಂಟಿ ಮಹಿಳೆಯ ಕೊಲೆ

Update: 2019-07-06 15:39 GMT

ಉಡುಪಿ, ಜು.6: ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಐದನೆ ಕ್ರಾಸ್ ನಲ್ಲಿರುವ ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿಕೊಂಡಿದ್ದ ಮಹಿಳೆಯೊಬ್ಬ ರನ್ನು ದುಷ್ಕರ್ಮಿಗಳು ಆಯುಧದಿಂದ ಕೊಲೆ ಮಾಡಿ ಚಿನ್ನಾಭರಣ ದೋಚಿ ರುವ ಘಟನೆ ಜು.5ರಂದು ರಾತ್ರಿ ಬೆಳಕಿಗೆ ಬಂದಿದೆ.

ಮೃತರನ್ನು ಸುಬ್ರಹ್ಮಣ್ಯ ನಗರದ ರತ್ನಾವತಿ ಜಿ.ಶೆಟ್ಟಿ (80) ಎಂದು ಗುರುತಿಲಾಗಿದೆ.

ಜು. 2ರ ಮಧ್ಯಾಹ್ನದಿಂದ ಜು.5ರ ರಾತ್ರಿ 8:30ರ ಮಧ್ಯಾವಧಿ ಯಲ್ಲಿ ಇವರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈ ಅವಧಿ ಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ರತ್ನಾವತಿ ಶೆಟ್ಟಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 ಬಳಿಕ ಅವರ ಕುತ್ತಿಗೆಯಲ್ಲಿದ್ದ  ಚಿನ್ನದ ಸರ ಮತ್ತು ಕೈಗಳಲ್ಲಿದ್ದ ಬಳೆ, ಕಿವಿಗಳಲ್ಲಿದ್ದ ಬೆಂಡೋಲೆಗಳನ್ನು ದೋಚಿಕೊಂಡು ಹೋಗಿದ್ದಾರೆನ್ನಲಾಗಿದೆ. ಅಲ್ಲದೆ ಮನೆಯ ಬೆಡ್‌ರೂಮಿನ ಹಾಗೂ ಹಾಲ್ನಲ್ಲಿದ್ದ ಸೊತ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಹರಡಿರುವುದು ಕಂಡುಬಂದಿದೆ.

ಇವರಿಗೆ ನಾಲ್ವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಅಂಬಲಪಾಡಿ ಮತ್ತು ಕೊರಂಗ್ರಪಾಡಿಯಲ್ಲಿ ವಾಸವಾಗಿದ್ದಾರೆ. ಅದೇ ರೀತಿ ಗಂಡು ಮಕ್ಕಳಲ್ಲಿ ಒಬ್ಬರು ಮುಂಬೈ, ಮತ್ತೊಬ್ಬರು ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದಾರೆ. ಇವರ ಪತಿ ತೀರಿ ಹೋಗಿದ್ದು, ಹಲವು ವರ್ಷಗಳಿಂದ ಇವರು ಒಬ್ಬರೇ ವಾಸ ಮಾಡಿಕೊಂಡಿದ್ದಾರೆ.

ಮೃತರು ತನ್ನ ಮನೆಯ ಹಿಂಬದಿಯಲ್ಲಿ ಎರಡು ಕೋಣೆಯನ್ನು ಬಾಡಿಗೆಗೆ ನೀಡುತ್ತಿದ್ದು, ಇದರಲ್ಲಿ ವಾಸ ಮಾಡಲು ಜು.1ರಂದು ಕಾರ್ಮಿಕ ದಂಪತಿ ಬಂದಿದ್ದರೆನ್ನಲಾಗಿದೆ. ಈ ದಂಪತಿ ಜು.3ರಿಂದ ನಾಪತ್ತೆಯಾಗಿದ್ದು, ಇವರೇ ಚಿನ್ನಾಭರಣದ ಆಸೆಗಾಗಿ ರತ್ನಾವತಿಯನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News