ವಿಕಾಸ ಕಾಲೇಜಿನಲ್ಲಿ ‘ವೃಕ್ಷ ವಿಕಾಸ’ ಕಾರ್ಯಕ್ರಮಕ್ಕೆ ಚಾಲನೆ

Update: 2019-07-06 16:27 GMT

ಶುಭ ಹಾರೈಸಿದ ಸಾಲು ಮರದ ತಿಮ್ಮಕ್ಕ

ಮಂಗಳೂರು, ಜೂ.6: ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನೇತೃತ್ವದ ವಿಕಾಸ ಕಾಲೇಜು ವತಿಯಿಂದ ಮನೆಗೊಂದು ಮರ ನೆಡುವ ಕಾರ್ಯಕ್ರಮ ಅಂಗವಾಗಿ 5000 ಗಿಡಗಳನ್ನು ನೆಡುವ ವೃಕ್ಷ ವಿಕಾಸ ಕಾರ್ಯಕ್ರಮಕ್ಕೆ ಕಾಲೇಜಿನ ಆವಣದಲ್ಲಿ ಇಂದು ಚಾಲನೆ ನೀಡಲಾಯಿತು.

ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಹಾಗೂ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ವಿಕಾಸ ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಮೂಲಕ ಾರ್ಯಕ್ರಮಕ್ಕೆ ಶುಭ ಕೋರಿದರು.

ಬಳಿಕ ಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಮರ ಗಿಡಗಳ ಬಗ್ಗೆ ಪ್ರೀತಿ, ಕಾಳಜಿ ವಹಿಸುವ ಮೂಲಕ ದೇಶಕ್ಕೆ ಮಾದರಿಯಾಗಿ ಬಾಳಬೇಕೆಂದು ಕರೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕಾದರೆ ಪ್ರಕೃತಿಯ ಉಳಿವು ಅತ್ಯಗತ್ಯ ಎಂದರು. ಇಂದು ನಾವು ಪ್ರಕೃತಿಯನ್ನು ಅಲಕ್ಷಿಸಿ ಮರಗಳನ್ನು ಕಡಿದ ಪರಿಣಾಮವಾಗಿಯೇ ನೀರಿನ ಬಗ್ಗೆ ಚರ್ಚಿಸುವ ಅನಿವಾರ್ಯತೆ ಎದುರಾಗಿದೆ. ಕಾಡು ಉಳಿಸಿ, ಮರಗಳನ್ನು ಬೆಳೆಸಲು ನಾವು ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ವತಿಯಿಂದ ನಡೆಸಲಾಗುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ತಿಂಗಳಿಗೊಮ್ಮೆ ವಿದ್ಯಾರ್ಥಿಗಳಿಗೆ ಪ್ರಕೃತಿ ಬಗ್ಗೆ ಕಾರ್ಯಾಗಾರ ಅಗತ್ಯ ಪ್ರಕೃತಿಯ ಬಗ್ಗೆ ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತಿಂಗಳಿಗೊಮ್ಮೆ ಕಾರ್ಯಾಗಾರ ನಡೆಸುವ ಅಗತ್ಯವಿದೆ. ರ್ಯಾಂಕ್ ಗಳಿಸುವುದಷ್ಟೇ ವಿದ್ಯಾರ್ಥಿಗಳ ಗುರಿಯಾಗಬಾರದು. ಪರಿಸರದ ಬಗ್ಗೆಯೂ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಂಸ್ಥೆಯ ಮುಖ್ಯಸ್ಥರಾದ ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.

ಅಧ್ಯಕ್ಷತೆಯನ್ನು ಶಾಸಕ ಡಾ. ಭರತ್ ಶೆಟ್ಟಿ ವಹಿಸಿದ್ದರು. ಅರಣ್ಯಾಧಿಕಾರಿ ಶ್ರೀಧರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿಕಾಸ ಸಮೂಹ ಸಂಸ್ಥೆಯ ಜೆ. ಕೊರಗಪ್ಪ, ಪಾರ್ಥಸಾರಥಿ ಪಾಲೆಮಾರ್ ಉಪಸ್ಥಿತರಿದ್ದರು.

ಈ ಸಂದರ್ಭ ಕಾಲೇಜಿನ ಹಳೆ ರಶ್ಮಿತ್ ಅವರ ಶೈಕ್ಷಣಿಕ ಸಾಧನೆಗಾಗಿ ಹಾಗೂ ಹಾಗೂ ವೃಕ್ಷ ದೇವತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಡೀನ್ ಮಂಜುಳಾ ಅನಿತಾ ರಾವ್ ಸ್ವಾಗತಿಸಿದರು. ಲಕ್ಷ್ಮೀಶ ಭಟ್ ವಂದಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News