ಕ್ಯಾಲಿಫೋರ್ನಿಯದಲ್ಲಿ ಪ್ರಬಲ ಭೂಕಂಪ

Update: 2019-07-06 17:48 GMT

ಲಾಸ್ ಏಂಜಲಿಸ್ (ಅಮೆರಿಕ), ಜು. 6: ರಿಕ್ಟರ್ ಮಾಪಕದಲ್ಲಿ 7.1ರಷ್ಟಿದ್ದ ಪ್ರಬಲ ಭೂಕಂಪ ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಶುಕ್ರವಾರ ಸಂಭವಿಸಿದೆ. ಕಂಪನದಿಂದಾಗಿ ಹಲವು ಕಟ್ಟಡಗಳಿಗೆ ಹಾನಿಯಾಗಿವೆ.

 ಇದೇ ಪ್ರದೇಶದಲ್ಲಿ ಒಂದು ದಿನ ಮುಂಚೆ ನಡೆದ ಪ್ರಾಯಶಃ ಪೂರ್ವ ಕಂಪನದ 11 ಪಟ್ಟು ಅಧಿಕ ಶಕ್ತಿಯನ್ನು ಶುಕ್ರವಾರದ ಕಂಪನ ಬಿಡುಗಡೆ ಮಾಡಿದೆ.

ಲಾಸ್ ಏಂಜಲಿಸ್‌ನ ಈಶಾನ್ಯಕ್ಕೆ 202 ಕಿ.ಮೀ. ದೂರದಲ್ಲಿರುವ ಡೆತ್ ವ್ಯಾಲಿ ನ್ಯಾಶನಲ್ ಪಾರ್ಕ್‌ನ ತುದಿಯಲ್ಲಿರುವ ರಿಜ್‌ಕ್ರೆಸ್ಟ್ ಪಟ್ಟಣದ ಸಮೀಪ ಸ್ಥಳೀಯ ಸಮಯ ರಾತ್ರಿ 8:20ಕ್ಕೆ ಭೂಮಿ ಕಂಪಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News