ನಾರಾಯಣ ಗುರು ಸಮಾಜ ಸುಧಾರಕ: ನಳಿನ್ ಕುಮಾರ್ ಕಟೀಲ್

Update: 2019-07-07 13:28 GMT

ಮಂಗಳೂರು, ಜು.7: ನಾರಾಯಣ ಗುರುಗಳು ಕೇವಲ ಆಧ್ಯಾತ್ಮ ಗುರುವಾಗಿರದೆ ಸಮಾಜ ಸುಧಾರಣೆಯಲ್ಲಿಯೇ ತೊಡಗಿಸಿಕೊಂಡರು. ಕೇರಳದಲ್ಲಿ ಮೊದಲ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದವರು ನಾರಾಯಣ ಗುರುಗಳು ಎಂದು ಸಂಸದ ಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಇಂದು ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಯುವ ವೇದಿಕೆ ವತಿಯಿಂದ ಆಯೋಜಿಸಲಾದ ಬ್ರಹ್ಮ ಶ್ರೀ ಬಂಗಾರದ ಪದಕ ಪ್ರದಾನ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಮುಖಿ ಚಿಂತನೆ ಜಾಗೃತಗೊಳಿಸಬಹುದು ಎಂದು ಹೇಳಿದ ಅವರು, ನಾರಾಯಣಗುರು ವೇದಿಕೆ ಶಿಕ್ಷಣಕ್ಕೆ ಪ್ರೋತ್ಸಾಹ ನೀುತ್ತಿರುವುದು ಶ್ಲಾಘನೀಯ ಎಂದರು.
ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಲೋಹಿತ್ ಕುವಾರ್ ಪಜೀರ್ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ವೇದವ್ಯಾಸ ಕಾಮತ್, ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಎಸ್.ಆರ್.ಎಸ್.ಮಸಾಲಾ ಮಾಲೀಕ ಶೈಲೇಂದ್ರ ಸುವರ್ಣ, ಬಂಗಾರದ ಪದಕದ ಪ್ರಾಯೋಜಕರಾದ ರತೀಂದ್ರನಾಥ್ ಎಚ್.ಬಂಟ್ವಾಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ನಿವೃತ್ತ ಶಿಕ್ಷಕಿ ಕೆ.ಎ.ರೋಹಿಣಿ ಟೀಚರ್, ಚಲನಚಿತ್ರ ನಟಿ ನವ್ಯಾ ಪೂಜಾರಿ ಉಪಸ್ಥಿತರಿದ್ದರು. ಯುವವೇದಿಕೆ ಸಂಚಾಲಕ ನೀಲಯ ಎಂ.ಅಗರಿ ಸ್ವಾಗತಿಸಿದರು.

ಸಭಾಕಾರ್ಯಕ್ರಮಕ್ಕೆ ಮೊದಲು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಪ್ರಸ್ತುತಗೊಂಡಿತು.

ಶ್ರಾವ್ಯಾಗೆ ಬ್ರಹ್ಮಶ್ರೀ ಚಿನ್ನದ ಪದಕ ಪ್ರದಾನ, ಸನ್ಮಾನ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 619 ಅಂಕಗಳಿಸಿದ ಶ್ರಾವ್ಯಾ ಕೆ.ಅವರಿಗೆ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಹೆತ್ತವರಾದ ವಸಂತ ಕುಮಾ್ ಮತ್ತು ಸೌಮ್ಯಾ ಉಪಸ್ಥಿತರಿದ್ದರು.

ಇದೇ ವೇಳೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದ ಸಾಧಕರಾದ ಪ್ರೊ.ಎಂ.ಎಸ್.ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಮುದ್ದು ಮೋಡುಬೆಳ್ಳೆ ಅವರ ಸಂಪಾದಕತ್ವದಲ್ಲಿ ರಚನೆಗೊಂಡ ಎಂ.ಎಸ್.ಕೋಟ್ಯಾನ್ ಅವರ ಕುರಿತ ಅಭಿನಂದನಾ ಗ್ರಂಥ ಹಾಗೂ ರಘುನಾಥ ವರ್ಕಾಡಿ ಅವರ ಸಂಪಾದಕತ್ವದಲ್ಲಿ ಹೊರತರಲಾದ ಬ್ರಹ್ಮಶ್ರೀ ವಾರ್ಷಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News