ಉಪ್ಪಿನಕೋಟೆ: ಪಿಎಫ್‌ಐಯಿಂದ ರಕ್ತದಾನ ಶಿಬಿರ

Update: 2019-07-07 13:44 GMT

ಬ್ರಹ್ಮಾವರ,ಫೆ.7: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ರಹ್ಮಾವರ ವಲಯ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಬೃಹತಂ ರಕ್ತದಾನ ಶಿಬಿರವು ರವಿವಾರ ಉಪ್ಪಿನಕೋಟೆ ಜಾಮೀಯ ಮಸೀದಿ ಹಾಲ್‌ನಲ್ಲಿ ಜರಗಿತು.

ಮಣಿಪಾಲ ಕೆಎಂಸಿಯ ಬ್ಲಡ್ ಬ್ಯಾಂಕಿನ ಮುಖ್ಯಸ್ಥೆ ಮತ್ತು ವೈದ್ಯೆ ಡಾ. ಫಾತಿಮಾ ಉರೂಜ್ ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ದಿಸುವುದೇ ಹೊರತು ಯಾವುದೇ ತೊಂದರೆ ಆಗುವುದಿಲ್ಲ. ಆದುದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.

ಉಪ್ಪಿನಕೋಟೆ ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಸಲ್ಮಾನ್ ಮಾತನಾಡಿ, ಯಾರಾದರೂ ಒಬ್ಬ ವ್ಯಕ್ತಿ ಒಂದು ಜೀವವನ್ನು ಉಳಿಸುವುದೆಂದರೆ ಇಡೀ ಮಾನವ ಕುಲವನ್ನು ಉಳಿಸಿದಂತೆ ಆಗುತ್ತದೆ. ಆದುದರಿಂದ ಜೀವ ಉಳಿಸಲು ಮಾಡುವ ರಕ್ತದಾನ ಬಹಳ ಪುಣ್ಯದ ಕಾರ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಎಫ್‌ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಮಲ್ಪೆ, ಸಾಮಾಜಿಕ ಸೇವಾ ಮುನೀರ್ ಕಲ್ಮಾಡಿ, ಉಪ್ಪಿನಕೋಟೆ ಮದ್ರಸದ ಅಧ್ಯಕ್ಷ ತಾಜುದ್ದಿನ್ ಇಬ್ರಾಹಿಂ, ಮಸೀದಿಯ ಅಧ್ಯಕ್ಷ ಜಮಾಲ್ ಹೈದರ್ ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಅಧ್ಯಕ್ಷ ಶಾಕಿರ್ ಸಾಹೆಬ್ ಸ್ವಾಗತಿಸಿದರು. ಮುಹಮ್ಮದ್ ಮಸೂದ್ ವಂದಿಸಿದರು. ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ ರಕ್ತದಾನ ಮಾಡಿದರು. ಒಟ್ಟು ಶಿಬಿರದಲ್ಲಿ 53 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News