ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2019-07-07 14:52 GMT

ಕಾಪು, ಜು.7: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಜು.6ರಂದು ಬೆಳಗ್ಗೆ ಉದ್ಯಾವರ ಗ್ರಾಮದ ಶಂಭುಕಲ್ಲು ಎಂಬಲ್ಲಿ ಬಂಧಿಸಿದ್ದಾರೆ.

ತೀರ್ಥಹಳ್ಳಿಯ ಮುಹಮ್ಮದ್ ತೊಯಿಬ್(29) ಹಾಗೂ ಮಲ್ಪೆ ಬಲರಾಮ ನಗರದ ಸರ್ದಾರ್ ವಾಹಿದ್(35) ಬಂಧಿತ ಆರೋಪಿಗಳು. ದಾವಣಗೆರೆಯ ಚನ್ನಗಿರಿಯಿಂದ ತರಲಾದ ಗಾಂಜಾವನ್ನು ಆರೋಪಿಗಳು ಉಡುಪಿ ಪರಿಸರ ದಲ್ಲಿ ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ಇವರಿಂದ ಮಾರುತಿ ಸ್ವಿಫ್ಟ್ ಕಾರು, ಮೊಬೈಲ್ ಹಾಗೂ 450 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News