ಸಿಂಡಿಕೇಟ್ ಬ್ಯಾಂಕ್ ನೌಕರನಿಂದ 48ಲಕ್ಷ ರೂ. ವಂಚನೆ

Update: 2019-07-07 14:55 GMT

ಉಡುಪಿ, ಜು.7: ಸಿಂಡಿಕೇಟ್ ಬ್ಯಾಂಕ್ ನೌಕರ ತನ್ನದೆ ಬ್ಯಾಂಕಿಗೆ 48ಲಕ್ಷ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಿತ್ ಆರ್.ಜಿ.ಪಿ. ಎಂಬಾತ ಸಿಂಡಿಕೇಟ್ ಬ್ಯಾಂಕ್ ಉಡುಪಿ ಕ್ಯಾಥೋ ಲಿಕ್ ಸೆಂಟರ್ ಶಾಖೆಯಲ್ಲಿ ಡೆಪ್ಯೂಟೇಶನ್ ಮೇಲೆ ಕರ್ತವ್ಯದಲ್ಲಿದ್ದು, ಜೂ.26 ರಂದು ಆತ ಯಾರದೋ ಖಾತೆಗೆ 40 ಲಕ್ಷ ರೂ. ಹಣವನ್ನು ಜಮಾ ಮಾಡಿದ್ದ ಎಂದು ದೂರಲಾಗಿದೆ.

ಅದೇ ರೀತಿ ಆತ ಮೇ 10ರಂದು ಬ್ಯಾಂಕಿನಿಂದ ಅನುಮತಿ ಹಾಗೂ ದಾಖಲಾತಿಗಳನ್ನು ಪಡೆಯದೆ 8 ಲಕ್ಷ ರೂ. ಹಣವನ್ನು ಸ್ಟಾಫ್ ವೆಹಿಕಲ್ ಲೋನ್‌ಗೆ ಜಮಾ ಮಾಡಿದ್ದಾನೆ. ಬ್ಯಾಂಕ್ ನೌಕರನಾಗಿರುವ ಈತ ತನ್ನ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಎಸಗಿ ಬ್ಯಾಂಕ್ ಗೆ ಒಟ್ಟು 48 ಲಕ್ಷ ರೂ. ವಂಚಿಸಿರುವುದಾಗಿ ಪ್ರಾದೇಶಿಕ ಪ್ರಬಂಧಕಿ ಸುಜಾತ ಜಿ. ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News