ದೇರಳಕಟ್ಟೆ: ಎಂಆರ್ ಪಿಎಲ್ ವತಿಯಿಂದ ನಿರ್ಮಾಣಗೊಂಡ ತಡೆಗೋಡೆ ಉದ್ಘಾಟನೆ

Update: 2019-07-07 16:45 GMT

ಕೊಣಾಜೆ: ಸಮಾಜದಲ್ಲಿರುವ ಅಶಕ್ತ ತಾಯಂದಿರ ಆರೈಕೆ ಮಾಡುವ ಮೂಲಕ ಲಯನ್ಸ್ ಸೇವಾಶ್ರಮ ಉತ್ತಮ ಕಾರ್ಯ ನಡೆಸುತ್ತಿದ್ದು, ಸರಕಾರದಿಂದ ಸಿಗುವ ಸವಲತ್ತುಗಳನ್ನು ನೀಡುವ ಕಾರ್ಯವನ್ನು ಮಾಡಲಾಗುವುದು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಮಂಗಳೂರಿನ ಸೇವಾಬಾವ ಚಾರಿಟೇಬಲ್ ಟ್ರಸ್ಟ್ ಇದರಾಶ್ರಯದ ದೇರಳಕಟ್ಟೆ ಬೆಳ್ಮದ ಸೇವಾಶ್ರಮದಲ್ಲಿ ಎಂಆರ್‍ಪಿಎಲ್ ವತಿಯಿಂದ ನಿರ್ಮಾಣಗೊಂಡಿರುವ ತಡೆಗೋಡೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಸೇವಾಶ್ರಮ ಉತ್ತಮ ಕಾರ್ಯವನ್ನು ನಡೆಸುತ್ತಾ ಬಂದಿದೆ. ಸೇವಾಶ್ರಮ ನಿವಾಸಿಗಳ ಆಧಾರ್ ಕಾರ್ಡ್ ಇದ್ದಲ್ಲಿ ಅವರಿಗೆ ಆಹರ ಪದಾರ್ಥಗಳು ಸರಕಾರದಿಂದ ದೊರೆಯುತ್ತದೆ ಈ ನಿಟ್ಟಿನಲ್ಲಿ ಎಲ್ಲರ ಆಧಾರ್ ಕಾರ್ಡ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. 

ಸೇವಾಶ್ರಮದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಜಿ.ಆರ್. ಶೆಟ್ಟಿ ಮಾತನಾಡಿ ಕಳೆದ 6 ವರ್ಷಗಳಿಂದ ಟ್ರಸ್ಟಿಗಳ ಮತ್ತು ದಾನಿಗಳ ಸಹಕಾರದಲ್ಲಿ ಸೇವಾಶ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಆಶ್ರಮದ ತಡೆಗೋಡೆ ನಿರ್ಮಾಣಕ್ಕೆ ಎಂಆರ್‍ಪಿಎಲ್ ಸಹಾಯಧನ ನೀಡಿದ್ದು, ಇದರೊಂದಿಗೆ ನೀರಿನ ಸಮಸ್ಯೆಗೆ ಬೋರ್‍ವೆಲ್‍ ಕೊರೆಸಲಾಗಿದೆ. ಇಲ್ಲಿ ಅನಾಥ ತಾಯಂದಿರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಶ್ಯಾಮಲಾಶೆಟ್ಟಿ ಭಾಗವಹಿಸಿದ್ದರು. ಸೇವಾಶ್ರಮದ ಸಂಚಾಲಕಿ ಗೀತಾ ಶೆಟ್ಟಿ, ಕಾರ್ಯದರ್ಶಿ ದೇವದಾಸ್, ಟ್ರಸ್ಟಿಗಳಾದ ಹರೀಶ್ ಆಳ್ವ, ಕೆ.ಪಿ.ರಾವ್, ಯಶವಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News